ಕಝಕಿಸ್ತಾನ: ಕಝಕಿಸ್ತಾನದ ಅಕ್ಟೌನಲ್ಲಿ ನಾಗರಿಕ ವಿಮಾನವೊಂದು ದುರಂತಕ್ಕೀಡಾಗಿದ್ದು ಹಲವು ಜನ ಸಾವಿಗೀಡಾಗಿರುವ ಶಂಕೆಯಿದೆ. ದುರಂತದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಕುವಿನಿಂದ ರಷ್ಯಾದ ಗ್ರೋಝ್ನಿ ಕಡೆಗೆ ಸಂಚರಿಸುತ್ತಿದ್ದ ವಿಮಾನವಾಗಿತ್ತು. ಇದರಲ್ಲಿ ಸುಮಾರು 70 ಕ್ಕೂ ಹೆಚ್ಚು ಪ್ರಯಾಣಿಕರಿದ್ದರೆಂದು ಹೇಳಲಾಗುತ್ತಿದೆ. ಲ್ಯಾಂಡಿಂಗ್ ವೇಳೆ ವಿಮಾನ ಕ್ರ್ಯಾಶ್ ಆಗಿದ್ದು ಬೆಂಕಿ ಹತ್ತಿಕೊಂಡಿದೆ.
ವಿಪರೀತ ಮಂಜು ಕವಿದ ವಾತಾವರಣವಿದ್ದಿದ್ದರಿಂದ ಪೈಲಟ್ ಗೆ ಸರಿಯಾಗಿ ಲ್ಯಾಂಡ್ ಮಾಡಲು ಆಗಿಲ್ಲ. ಇದೇ ಕಾರಣಕ್ಕೆ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಬಂದಿದೆ. ಘಟನೆಯಲ್ಲಿ 30 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಸಾವಿನ ನಿಖರ ಮಾಹಿತಿ ಇನ್ನಷ್ಟೇ ಬರಬೇಕಿದೆ.
ವಿಮಾನ ಲ್ಯಾಂಡ್ ಆಗುವ ವೇಳೆ ನಿಯಂತ್ರಣ ತಪ್ಪಿದ್ದು, ಭೂ ಸ್ಪರ್ಶವಾಗುತ್ತಿದ್ದಂತೇ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ವಿಮಾನ ಸಂಪೂರ್ಣವಾಗಿ ಉರಿದು ಭಸ್ಮವಾಗಿದೆ. ತಕ್ಷಣವೇ ಬೆಂಕಿ ನಂದಿಸುವ ಕೆಲಸವಾಗಿದೆ.