Select Your Language

Notifications

webdunia
webdunia
webdunia
webdunia

ವಿಮಾನ ಹಾರುತ್ತಿದ್ದಾಗ ಕ್ಯಾಬಿನ್ ನಲ್ಲಿ ನಿದ್ದೆ ಮಾಡಿದ್ದ ಪೈಲಟ್!

ವಿಮಾನ ಹಾರುತ್ತಿದ್ದಾಗ ಕ್ಯಾಬಿನ್ ನಲ್ಲಿ ನಿದ್ದೆ ಮಾಡಿದ್ದ ಪೈಲಟ್!
Karachi , ಸೋಮವಾರ, 8 ಮೇ 2017 (10:23 IST)
ಕರಾಚಿ: ವಿಮಾನ ಹಾರುವಾಗ ಪೈಲಟ್ ನಿದ್ದೆ ಮಾಡಿದರೆ ಏನಾಗುತ್ತದೆ? ಅದೂ 305 ಪ್ರಯಾಣಿಕರಿದ್ದ ವಿಮಾನದಲ್ಲಿ ಎರಡು ಗಂಟೆ ನಿದ್ದೆ ಮಾಡಿದರೆ? ಏನಾಗುತ್ತದೋ ಬಿಡುತ್ತದೋ ಆದರೆ ಆ ಪೈಲಟ್ ನನ್ನು ಮಾತ್ರ ಅಮಾನತುಗೊಳಿಸಲಾಗಿದೆ.

 
ಇದು ನಡೆದಿದ್ದು ಪಾಕಿಸ್ತಾನದಲ್ಲಿ. ಪಾಕಿಸ್ತಾನ ಏರ್ ಲೈನ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಖ್ತರ್ ಹಶ್ಮಿ ಎನ್ನುವ ಪೈಲಟ್ ಇಸ್ಲಾಮಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನದಲ್ಲಿ 2 ಗಂಟೆ ವಿಮಾನ ಹಾರುತ್ತಿರುವಾಗಲೇ ನಿದ್ದೆ ಹೋಗಿದ್ದು ಭಾರೀ ಸುದ್ದಿಯಾಗಿತ್ತು.

ವಯಸ್ಸಿನಲ್ಲಿ ಹಿರಿಯನಾಗಿದ್ದ ಹಶ್ಮಿ ತಮ್ಮ ಜ್ಯೂನಿಯರ್ ಪೈಲಟ್ ಗೆ ನಿರ್ದೇಶನ ನೀಡಬೇಕಿತ್ತು. ಆದರೆ ಅದರ ಬದಲು ಅವರು ಸ್ವಲ್ಪ ಸಮಯ ನಿದ್ದೆ ಮಾಡೋಣವೆಂದು ಮಲಗಿದವರು 2 ಗಂಟೆ ಏಳಲೇ ಇಲ್ಲ.

ಇದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪ್ರಕಟವಾಯ್ತು. ನಂತರ ಎಚ್ಚೆತ್ತುಕೊಂಡ ಪಾಕ್ ಏರ್ ಲೈನ್ಸ್ ಸಂಸ್ಥೆ ಪೈಲಟ್ ನನ್ನು ಸೇವೆಯಿಂದ ಮುಕ್ತಿಗೊಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕೇಜ್ರಿವಾಲ್ ರಾಜೀನಾಮೆಗೆ ಹೆಚ್ಚಿದ ಒತ್ತಾಯ