Select Your Language

Notifications

webdunia
webdunia
webdunia
webdunia

ವಿಮಾನ ಪತನ: ಪ್ರಸಿದ್ಧ ಗಾಯಕನ ಪತ್ನಿ ಸೇರಿ 48 ಸಾವು

ವಿಮಾನ ಪತನ
ಇಸ್ಲಾಮಾಬಾದ್ , ಗುರುವಾರ, 8 ಡಿಸೆಂಬರ್ 2016 (08:32 IST)
ಪಾಕ್ ಏರ್‌ಲೈನ್ಸ್ ವಿಮಾನ ಪತನಗೊಂಡು 48 ಮಂದಿ ದುರ್ಮರಣವನ್ನಪ್ಪಿದ್ದಾರೆ. ಬುಧವಾರ ಸಾಯಂಕಾಲ ಈ ದುರ್ಘಟನೆ ನಡೆದಿದ್ದು ವಿಮಾನ ಪಖ್ತೂಂಖ್ವಾ ಪ್ರಾಂತ್ಯದ ಚಿತ್ರಾಲ್‌ನಿಂದ ಇಸ್ಲಾಮಾಬಾದ್ ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. 

 
ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಬಟೋಬಾದ್ ಬಳಿಯ ಹವೇಲಿಯನ್ ಉಪನಗರ ಪಿಪ್ಲಿಯನ್‌ನಲ್ಲಿ  ವಿಮಾನ ಪತನಗೊಂಡಿತು. ನತದೃಷ್ಟ ವಿಮಾನದಲ್ಲಿ 6 ಸಿಬ್ಬಂದಿ ಸೇರಿದಂತೆ ಒಟ್ಟು 48 ಪ್ರಯಾಣಿಕರಿದ್ದರು. ಮೃತರಲ್ಲಿ ಪ್ರಸಿದ್ಧ ಗಾಯಕ
ಜುನೈದ್ ಜಮ್‌ಷೇದ್ ರತ್ನಿ ವಾರಿಚ್ ಕೂಡ ಇದ್ದಾರೆಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
 
ಚಿತ್ರಾಲ್‌ನಿಂದ 3.30ಕ್ಕೆ ಹೊರಟಿದ್ದ ವಿಮಾನ 4.40ಕ್ಕೆ ಇಸ್ಲಾಮಾಬಾದ್‌ನಲ್ಲಿ ಇಳಿಯಬೇಕಿತ್ತು. ಆದರೆ ಮಾರ್ಗ ಮಧ್ಯದಲ್ಲಿ ವಿಮಾನ ರೇಡಾರ ಸಂಪರ್ಕ ತಪ್ಪಿಸಿಕೊಂಡಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ದರೋಡೆ: ಸಬ್ ಇನ್ಸಪೆಕ್ಟರ್ ಸೇರಿ ಐವರು ಪೊಲೀಸರ ಬಂಧನ