Select Your Language

Notifications

webdunia
webdunia
webdunia
webdunia

ಜೆಎಎಂ ಸಂಘಟನೆ ಮುಖ್ಯಸ್ಥ ಭಯೋತ್ಪಾದಕ: ಮುಷರಫ್

ಜೆಎಎಂ ಸಂಘಟನೆ ಮುಖ್ಯಸ್ಥ ಭಯೋತ್ಪಾದಕ: ಮುಷರಫ್
ಇಸ್ಲಾಮಾಬಾದ್ , ಶುಕ್ರವಾರ, 28 ಅಕ್ಟೋಬರ್ 2016 (16:41 IST)
ಇಸ್ಲಾಮಾಬಾದ್: ಜೈಷೆ-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಭಯೋತ್ಪಾದಕ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿಕೆ ನೀಡಿದ್ದಾರೆ.
 

 
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ನಡೆದ ಹಲವಾರು ಬಾಂಬ್ ದಾಳಿ ಹಾಗೂ ಸ್ಫೋಟ ಪ್ರಕರಣಗಳಲ್ಲಿ ಅಜರ್ ಕೈವಾಡವಿದೆ. ಅವನ ಗರಡಿಯಲ್ಲಿ ಸಾವಿರಾರು ಭಯೋತ್ಪಾದಕರು ತಯಾರಾಗುತ್ತಿದ್ದಾರೆ. ಇದು ಚೀನಾ ಸರಕಾರಕ್ಕೆ ಗೊತ್ತಿದೆ ಎನ್ನುವುದು ನನ್ನ ಭಾವನೆ. ಒಂದು ವೇಳೆ ಗೊತ್ತಿಲ್ಲ ಎಂದಾದರೆ ಈ ವಿಷಯದಲ್ಲಿ ಅದು ಯಾಕಾಗಿ ಹಸ್ತಕ್ಷೇಪ ಮಾಡಬೇಕು ಎಂದು ಚೀನಾಕ್ಕೆ ಪ್ರಶ್ನಿಸಿದ್ದಾರೆ.
 
ಅಜರ್ ಸಾಕಷ್ಟು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪಾಕಿಸ್ತಾನ ಸೇರಿದಂತೆ ಭಾರತ ಹಾಗೂ ಇನ್ನಿತರ ರಾಷ್ಟ್ರಗಳಿಗೆ ತಿಳಿದಿದೆ. ಆತನನ್ನು ಉಗ್ರವಾದಿ ಎಂದು ಘೋಷಿಸಿ, ವಿಶ್ವಸಂಸ್ಥೆಯ ಕಪ್ಪು ಪಟ್ಟಿಯಲ್ಲಿ ಸೇರಿಸಬೇಕೆನ್ನುವುದು ಭಾರತದ ಒತ್ತಾಯ. ಆದರೆ ಆತ ಭಯೋತ್ಪಾದಕ ಎಂದು ನಿಖರವಾಗಿ ಗುರುತಿಸಲು ಯಾವುದೇ ಗಟ್ಟಿಯಾದ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಚೀನಾ ಹೇಳುತ್ತಿದೆ ಎಂದರು.
 
ಆದರೆ, ಕುರಿತು ಚೀನಾಕ್ಕೆ ಡ್ಡಿಪಡಿಸಬೇಡಿ ಎಂದು ನೀವು ಹೇಳಬಹುದಲ್ಲ ಎನ್ನುವ ಪ್ರಶ್ನೆಗೆ ಮುಷರಫ್ ಅವರಿಂದ ಸರಿಯಾದ ಉತ್ತರವಿಲ್ಲ. ಅಲ್ಲದೆ, ದೆಹಲಿಯಲ್ಲಿ ಪಾಕ್ ಗೂಢಚಾರರು ಸೆರೆ ಬಗ್ಗೆ ಕೇಳಿದ ಪ್ರಶ್ನೆಗೂ ಸರಿಯಾಗಿ ಉತ್ತರಿಸದೆ, ಹಾಗೊಂದು ವೇಳೆ ಅಂತಹದ್ದೇನಾದರೂ ನಡೆದಿದ್ದರೆ ಯಾವ ರಾಷ್ಟ್ರವೂ ಅದಕ್ಕೆ ಬೆಂಬಲ ನೀಡಬಾರದು ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧನ ಸಾವಿಗೆ ಪ್ರತೀಕಾರವಾಗಿ 50 ಬೀದಿನಾಯಿ ಮಾರಣಹೋಮ