Select Your Language

Notifications

webdunia
webdunia
webdunia
webdunia

ವೃದ್ಧನ ಸಾವಿಗೆ ಪ್ರತೀಕಾರವಾಗಿ 50 ಬೀದಿನಾಯಿ ಮಾರಣಹೋಮ

ವೃದ್ಧನ ಸಾವಿಗೆ ಪ್ರತೀಕಾರವಾಗಿ 50 ಬೀದಿನಾಯಿ ಮಾರಣಹೋಮ
ತಿರುವನಂತಪುರಮ್ , ಶುಕ್ರವಾರ, 28 ಅಕ್ಟೋಬರ್ 2016 (16:29 IST)
ಬೀದಿ ನಾಯಿಗಳ ದಾಳಿಗೆ 90 ವರ್ಷದ ವೃದ್ಧರೋರ್ವರು ಅಸುನೀಗಿದ ಘಟನೆಯಿಂದ ರೊಚ್ಚಿಗೆದ್ದ ನಾಗರಿಕರು 50ಕ್ಕೂ ಹೆಚ್ಚು ಬೀದಿನಾಯಿಗಳನ್ನು ಅಮಾನವೀಯವಾಗಿ ಹತ್ಯೆ ಮಾಡಿದ ಹೇಯ ಘಟನೆ ಇಲ್ಲಿನ ವರ್ಕಲದಲ್ಲಿ ಗುರುವಾರ ನಡೆದಿದೆ. 

ಬುಧವಾರ ಮುಂಜಾನೆ ತನ್ನ ಮನೆ ಮುಂದೆ ಕುಳಿತಿದ್ದ ವೃದ್ಧ ರಾಘವನ್ ಮೇಲೆ 5 ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿದ್ದವು.
 
ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಸಾಮಾಜಿಕ ಕಾರ್ಯಕರ್ತ ಜೋಸ್ ಮಾವೇಲಿ ನೇತೃತ್ವದಲ್ಲಿ ಬೀದಿ ನಾಯಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದಾರೆ.  
 
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿ ಜೋಸ್ ಮಾವೇಲಿ ಮತ್ತು ಇತರರನ್ನು ಸ್ಥಳೀಯರ ವಿರೋಧದ ನಡುವೆಯೂ ಬಂಧನಕ್ಕೊಳಪಡಿಸಿದ್ದಾರೆ. 
 
ನಾಯಿಗಳ ಹತ್ಯೆಗೆ ಬಂದೂಕು ಬಳಸುವ ಯೋಜನೆ ರೂಪಿಸಿದ್ದ ಆರೋಪದ ಮೇಲೆ ಈ ಹಿಂದೆ ಕೂಡ ಜೋಸ್ ಬಂಧನವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಬ್ಬ ಪಾಕ್ ಗೂಢಾಚಾರನ ಬಂಧನ