Daily Horoscope
✕

ಶಾಶ್ವತ ಕೊರೊನಾ ಟೆಸ್ಟಿಂಗ್ ಸೆಂಟರ್ ತೆರೆದ ಚೀನಾ

Webdunia
ಶುಕ್ರವಾರ, 6 ಮೇ 2022 (11:57 IST)
ಬೀಜಿಂಗ್ : ಚೀನಾದಲ್ಲಿ ಕೊರೊನಾ ಪದೇ ಪದೇ ಕಾಟ ಕೊಡುತ್ತಿದೆ. ಇದರಿಂದಾಗಿ ಇದೀಗ 10,000 ಶಾಶ್ವತ ಕೊರೊನಾ ಟೆಸ್ಟಿಂಗ್ ಸೆಂಟರ್ ತೆರೆಯಲು ಚೀನಾ ಸರ್ಕಾರ ನಿರ್ಧರಿಸಿದೆ.

ಶಾಂಘೈ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದಂತೆ ರ್ಯಾಂಡಮ್ ಟೆಸ್ಟ್ಗೆ ಸ್ಥಳೀಯಾಡಳಿತ ನಿರ್ಧರಿಸಿತು. ಆ ಬಳಿಕ ಶಾಂಘೈಯಲ್ಲಿ ಲಾಕ್ಡೌನ್ ಮಾಡಲಾಗಿತ್ತು. ಈ ವೇಳೆ 9,000 ಕೊರೊನಾ ಟೆಸ್ಟಿಂಗ್ ಸೆಂಟರ್ಗಳನ್ನು ತೆರೆಯಲಾಗಿತ್ತು.

ಈ ವೇಳೆ ಪ್ರತಿದಿನ ಕೊರೊನಾ ಆರ್ಟಿಪಿಸಿಆರ್ ಟೆಸ್ಟ್ ನಡೆಸಲು ಜನರಿಗೆ ಸೂಚನೆ ನೀಡಲಾಗಿತ್ತು. ಹಾಗಾಗಿ 9,000 ಕೊರೊನಾ ಟೆಸ್ಟಿಂಗ್ ಸೆಂಟರ್ ತೆರಯಲಾಗಿತ್ತು. ಇದೀಗ 5,000 ಟೆಸ್ಟಿಂಗ್ ಸೆಂಟರ್ಗಳು ಕಾರ್ಯಾಚರಿಸುತ್ತಿದೆ. ಚೀನಾದಲ್ಲಿ ಶೂನ್ಯ ಕೊರೊನಾ ಪ್ರಕರಣಕ್ಕೆ ಪಣ ತೊಟ್ಟಿರುವ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. 

ಈಗಾಗಲೇ ಜನ ಸಾಮಾನ್ಯರು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಕ್ಕೂ ಮುನ್ನ ಕೊರೊನಾ ಟೆಸ್ಟ್ ಕಡ್ಡಾಯ ಎಂಬ ನಿಯಮ ಜಾರಿ ಮಾಡಲಾಗಿದೆ. ರೈಲು, ಪಾರ್ಕ್, ರಸ್ತೆ, ಮೆಟ್ರೋ, ಶಾಲೆ, ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೇವಲ 15 ನಿಮಿಷಗಳಲ್ಲಿ ಟೆಸ್ಟಿಂಗ್ ನಡೆಸುವ ಕಾರ್ಯ ಚೀನಾದಲ್ಲಿ ನಡೆಯುತ್ತಿದೆ.

ಪ್ರಸ್ತುತ ಕಾರ್ಯಾಚರಿಸುತ್ತಿರುವ 9,000 ಟೆಸ್ಟಿಂಗ್ ಸೆಂಟರ್ ಜೊತೆಗೆ 1,000 ನೂತನ ಸೇರಿ ಒಟ್ಟು 10,000 ಶಾಶ್ವತ ಕೊರೊನಾ ಟೆಸ್ಟಿಂಗ್ ಸೆಂಟರ್ಗಳನ್ನು ನಗರದೆಲ್ಲೆಡೆ ತೆರೆಯಲು ಸರ್ಕಾರ ತೀರ್ಮಾನಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ: ಸಿ.ಟಿ.ರವಿ

ಸ್ಟಿಂಗ್ ಆಪರೇಷನ್ ಸಿನಿಮಾದ ನಿರ್ಮಾಪಕ, ನಿರ್ದೇಶಕ ಯಾರು: ಬಿ.ಶ್ರೀರಾಮುಲು

ಇದ್ದಕ್ಕಿದ್ದಂತೆ ಗಂಡಕಿ ನದಿಯಲ್ಲಿ ನುಗ್ಗಿ ಬಂದ ಪ್ರವಾಹ: ಭೀಕರ ದೃಶ್ಯ ಸೆರೆ Video

ಪೊಲೀಸ್ ಕಸ್ಟಡಿಯಲ್ಲಿದ್ದ ಅಭಿಜಿತ್ ದಿಪ್ಕೆ ಮತ್ತು ಸ್ನೇಹಿತರು ಕೊನೆಗೂ ರಿಲೀಸ್: ಆದರೆ ಷರತ್ತು ಅನ್ವಯ

ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ ಮೆಟ್ರೋದಲ್ಲಿ ಪ್ರಯಾಣ

ಮುಂದಿನ ಸುದ್ದಿ
Show comments