Select Your Language

Notifications

webdunia
webdunia
webdunia
webdunia

ಪುಟ್ಟ ಮಗಳ ಕೈಯ್ಯಲ್ಲಿ ಎಕೆ 47 ಕೊಟ್ಟು ಮೋದಿಯನ್ನು ಕೆಣಕಿದ ಪಾಕ್ ಪ್ರಜೆ

ಪುಟ್ಟ ಮಗಳ ಕೈಯ್ಯಲ್ಲಿ ಎಕೆ 47 ಕೊಟ್ಟು ಮೋದಿಯನ್ನು ಕೆಣಕಿದ ಪಾಕ್ ಪ್ರಜೆ
ನವದೆಹಲಿ , ಮಂಗಳವಾರ, 27 ಸೆಪ್ಟಂಬರ್ 2016 (10:29 IST)
ಉರಿ ಸೇನಾನೆಲೆಯ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿದ ಬಳಿಕ ಎರಡು ದೇಶಗಳ ನಡುವೆ ದ್ವೇಷ ಮತ್ತಷ್ಟು ಭುಗಿಲೆದ್ದಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದರೂ ಪಾಕ್ ಸರ್ಕಾರ ಬಿಡಿ ಅಲ್ಲೇ ಅಲ್ಲಿನ ಪ್ರಜೆಗಳು ಸಹ ಭಾರತವನ್ನು ಕೆಣಕುವುದನ್ನು ಮಾತ್ರ ಬಿಟ್ಟಿಲ್ಲ.ಅದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು 'ಯಥಾ ರಾಜಾ ತಥಾ ಪ್ರಜಾ' ಎನ್ನುವುದನ್ನು ಸಾಬೀತು ಪಡಿಸುವಂತಿದೆ. 
ಏನೂ ಅರಿಯದ ಪುಟ್ಟ ಮಗಳ ಕೈಯ್ಯಲ್ಲಿ ಎಕೆ 47 ಗನ್ ಕೊಟ್ಟು ಮೋದಿ ಮತ್ತು ಭಾರತಕ್ಕೆ ಎಚ್ಚರಿಕೆ ನೀಡಲು ಹೇಳಿಕೊಟ್ಟಿದ್ದಾನೆ. ಆಕೆ ಏನನ್ನು ಹೇಳುತ್ತಿದ್ದಾಳೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ ಆದರೆ ಮೋದಿ, ಭಾರತ ಎನ್ನುತ್ತಿರುವುದು ಸ್ಪಷ್ಟವಾಗಿ ಕೇಳುತ್ತಿದ್ದು ತಂದೆ ಹೇಳಿದಂತೆ ಎಚ್ಚರಿಕೆ ನೀಡುತ್ತಿದ್ದಾಳೆ.
 
ಪಾಕ್ ಜನರೇ ಈ ವಿಡಿಯೋವನ್ನು ಟೀಕಿಸಿದ್ದು ಪೆನ್ ಕೊಡುವ ಕೈಯ್ಯಿಗೆ ಗನ್ ಕೊಡಬೇಡ. ನಮಗೆ ಬೇಕಿರುವುದು ಶಿಕ್ಷಣ, ಯುದ್ಧವಲ್ಲ ಎಂದಿದ್ದಾರೆ. 
ಪುಟ್ಟ ಮಗಳ ಕೈಯ್ಯಲ್ಲಿ ಎಕೆ 47 ಕೊಟ್ಟು ಮೋದಿಯನ್ನು ಕೆಣಕಿದ ಪಾಕ್ ಪ್ರಜೆ
 
 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿ ತಾಯಿ- ಪತ್ನಿ ಬರ್ಬರ ಹತ್ಯೆ