Publish Date: Thu, 25 May 2017 (11:54 IST)
Updated Date: Thu, 25 May 2017 (11:56 IST)
ಇಸ್ಲಾಮಾಬಾದ್: ಪಾಕಿಸ್ತಾನದ ಮತ್ತೊಂದು ದೊಡ್ಡ ನಾಟಕ ಬಯಲಾಗಿದೆ. ಅದೂ ಅವರದೇ ಮಾಜಿ ಸೇನಾಧಿಕಾರಿಯ ಬಾಯಿಯಿಂದಲೇ. ಅದು ಕುಲಭೂಷಣ್ ವಿಚಾರದಲ್ಲಿ.
ದೇಶ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಭಾರತೀಯ ನೌಕಾ ಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಗೆ ಪಾಕ್ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು.
ವೈಯಕ್ತಿಕ ಕೆಲಸಕ್ಕಾಗಿ ಇರಾನ್ ಗೆ ಹೋಗಿದ್ದಾಗ ಕುಲಭೂಷಣ್ ರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ ಎಂದು ಭಾರತ ಆರೋಪಿಸಿತ್ತು. ಆದರೆ ದೇಶ ವಿರೋಧಿ ಕೆಲಸ ಮಾಡಿದ್ದ ಜಾದವ್ ರನ್ನು ಬಲೂಚಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಪಾಕ್ ವಾದಿಸುತ್ತಲೇ ಬಂದಿತ್ತು.
ಆದರೆ ಪಾಕಿಸ್ತಾನದ ಈ ಪೊಳ್ಳು ವಾದವನ್ನು ಅವರದೇ ಮಾಜಿ ಸೇನಾಧಿಕಾರಿ ಅಮ್ಜದ್ ಶೊಯೇಬ್ ಸಾಬೀತುಪಡಿಸಿದ್ದಾರೆ. ಜಾದವ್ ರನ್ನು ಇರಾನ್ ನಿಂದಲೇ ಬಂಧಿಸಲಾಗಿತ್ತು ಎನ್ನುವುದನ್ನು ಶೊಯೇಬ್ ಒಪ್ಪಿಕೊಂಡಿದ್ದಾರೆ. ಈ ಮೂಲಕ ಪಾಕ್ ನ ಮತ್ತೊಂದು ಮುಖವಾಡ ಬಯಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ