Select Your Language

Notifications

webdunia
webdunia
webdunia
webdunia

ಕಾನೂನುಬಾಹಿರ ದೇಣಿಗೆ ಸಂಗ್ರಹ: ಹಫೀಜ್ ಸಯೀದ್ ವಿರುದ್ಧ ಕ್ರಮಕ್ಕೆ ಪಾಕ್ ಸರ್ಕಾರ ಆದೇಶ

ಕಾನೂನುಬಾಹಿರ ದೇಣಿಗೆ ಸಂಗ್ರಹ: ಹಫೀಜ್ ಸಯೀದ್ ವಿರುದ್ಧ ಕ್ರಮಕ್ಕೆ ಪಾಕ್ ಸರ್ಕಾರ ಆದೇಶ
ಇಸ್ಲಾಮಾಬಾದ್ , ಶುಕ್ರವಾರ, 29 ಜುಲೈ 2016 (19:18 IST)
ಕಳೆದ 2008ರಲ್ಲಿ ಮುಂಬೈ ದಾಳಿಗೆ ದೇಣಿಗೆ ಸಂಗ್ರಹಿಸಿರುವ ಬಗ್ಗೆ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಸರಕಾರ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದೆ. 
 
ಫಲಾಹ್ -ಎ-ಇನ್‍‌ಸಾಯತ್ ಫೌಂಡೇಶನ್ ಮೂಲಕ ಕಾನೂನುಬಾಹಿರವಾಗಿ ಧರ್ಮಾರ್ಥ ಕಾರ್ಯಗಳ ನೆಪದಲ್ಲಿ ಹಫೀಜ್ ಸಯೀದ್ ದೇಣಿಗೆ ಸಂಗ್ರಹಿಸಿರುವ ಬಗ್ಗೆ ತನಿಖೆ ನಡೆಸುವಂತೆ ಪಾಕಿಸ್ತಾನದ ಗೃಹ ಸಚಿವಾಲಯ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದೆ. 
 
166 ಮಂದಿ ಸಾವನ್ನಪ್ಪಿದ ಮುಂಬೈ ಉಗ್ರರ ದಾಳಿಯ ಮಾಸ್ಟರ್‌ಮೈಂಡ್ ಎಂದು ಕುಖ್ಯಾತಿ ಪಡೆದಿರುವ ಸಯೀದ್, ವಿಶ್ವಸಂಸ್ಥೆಯ ಉಗ್ರಗಾಮಿಗಳ ಪಟ್ಟಿಯಲ್ಲಿ ಕೂಡಾ ಸ್ಥಾನ ಪಡೆದಿದ್ದಾನೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. 
 
ಪಾಕಿಸ್ತಾನದ ಕಾನೂನಿಗೆ ವಿರುದ್ಧವಾಗಿ ಕೆಲವು ಸಂಘಟನೆಗಳು ಕಾನೂನುಬಾಹಿರವಾಗಿ ದೇಣಿಗೆ ಸಂಗ್ರಹಿಸುತ್ತಿರುವದು ಬಹಿರಂಗವಾಗಿದ್ದರಿಂದ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಆದೇಶ ನೀಡಲಾಗಿದೆ.
 
ಹಪೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ ಸಂಸ್ಥೆಯ ಸದಸ್ಯರು ರಮಜಾನ್ ಹಬ್ಬದ ಸಂದರ್ಭದಲ್ಲಿ ಧರ್ಮಾರ್ಥ ಕಾರ್ಯಗಳಿಗಾಗಿ ದೇಣಿಗೆ ನೀಡುವಂತೆ ಜನತೆಗೆ ಆಹ್ವಾನ ನೀಡಿ ಭಿತ್ತಿಪತ್ರಗಳನ್ನು ಹಂಚಿದ್ದರು ಎಂದು ಡಾನ್ ವರದಿ ಮಾಡಿದೆ. 
 
ಪಂಜಾಬ್ ಸರಕಾರ ಯಾವುದೇ ಪ್ರಮುಖ ಕಾರಣವಿಲ್ಲದೇ ದೇಣಿಗೆ ಸಂಗ್ರಹಿಸುವ ಧಾರ್ಮಿಕ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು. ಆರಂಭದಲ್ಲಿಯೇ ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸೆಕ್ಸ್: ಪಾತಾಳಕ್ಕೆ ಕುಸಿದ ಶೇರುಪೇಟೆ ಸಂವೇದಿ ಸೂಚ್ಯಂಕ