ಪುಲ್ವಾಮಾ ದಾಳಿಯ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಭಾರತ ಸಾಕ್ಷ್ಯ ನೀಡಬೇಕು ಎಂದ ಪಾಕಿಸ್ತಾನ ಪ್ರಧಾನಿ

Webdunia
ಬುಧವಾರ, 20 ಫೆಬ್ರವರಿ 2019 (06:54 IST)
ಪಾಕಿಸ್ತಾನ : ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಭಾರತ ಸರಿಯಾದ ಸಾಕ್ಷ್ಯ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.


ಅವಂತಿಪುರ್ -ಪುಲ್ವಾನ ಮಾರ್ಗ ಮಧ್ಯದಲ್ಲಿ ಸಾಗುತ್ತಿದ್ದ ಸಿ.ಆರ್.ಪಿ.ಎಫ್. ಯೋಧರಿದ್ದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಘಟನೆಯಲ್ಲಿ 44 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಪುಲ್ವಾಮಾ ದಾಳಿಯ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ  ಭಾರತ ತಿಳಿಸಿದ ಹಿನ್ನಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪುಲ್ವಾಮಾ ದಾಳಿಯ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದರೆ ಭಾರತ ನಮಗೆ ಸಾಕ್ಷಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.


‘ನಾವು ಸಹ ಉಗ್ರರಿಂದ ಸಂತ್ರಸ್ತರಾಗಿದ್ದೇವೆ. ಯಾರೂ ಹಿಂಸೆಗೆ ಪ್ರಚೋದನೆ ನೀಡುತ್ತಾರೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಆದರೆ ದಾಳಿಯ ಬಗ್ಗೆ ನಮಗೆ ಸಾಕ್ಷ್ಯಾಧಾರಗಳ ಅವಶ್ಯಕತೆ ಇದೆ. ಭಾರತ ಸರ್ಕಾರ ಒಂದೊಮ್ಮೆ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಕೂಡ ಸುಮ್ಮನೆ ಕೂರುವುದಿಲ್ಲ. ಪ್ರತಿದಾಳಿ ನಡೆಸಲು ನಮಗೆ ಬರುತ್ತದೆ. ಆದರೆ ಈ ವಿಚಾರ ಮಾತುಕತೆಯಲ್ಲಿ ಬಗೆ ಹರಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಆರ್ ಎಸ್ಎಸ್ ಕಾಪಾಡಿತಾ: ಕೇಸ್ ಹಾಕ್ತೀನಿ ಎಂದ ಪ್ರಿಯಾಂಕ್

ಕೃತಿಕಾ ಸಾವನ್ನಪ್ಪಿದ ಬಳಿಕ ಮಹೇಂದ್ರ ರೆಡ್ಡಿ ಈ ವಿಚಾರಕ್ಕೆ ತುಂಬಾನೇ ಹಠ ಹಿಡಿದಿದ್ದಂತ್ತೆ

ಬೆಳೆದು ಬಂದ ಮೂಲವನ್ನು ಎಂದೂ ಮರೆಯಬಾರದು: ಟೀಕಾಕಾರರಿಗೆ ಡಿಕೆ ಶಿವಕುಮಾರ್‌ ಕ್ಲಾಸ್‌

ಬಿಹಾರ ಚುನಾವಣೆ: ಕೈತಪ್ಪಿದ ಟಿಕೆಟ್‌, ಬಟ್ಟೆ ಹರಿದುಕೊಂಡು ಹೋರಳಾಡಿದ ಆರ್‌ಜೆಡಿ ನಾಯಕ

ಅಭಿಷೇಕ್ ಆಚಾರ್ಯ ಬದುಕಿನಲ್ಲಿ ಆಟವಾಡಿದ ನಿರೀಕ್ಷಾ ಕೊನೆಗೂ ಅರೆಸ್ಟ್‌

ಮುಂದಿನ ಸುದ್ದಿ
Show comments