Webdunia - Bharat's app for daily news and videos

Install App

ಸಂದರ್ಶನಕ್ಕೆ ಬಂದ ಯುವತಿಗೆ ಕಂಪೆನಿಯ ಮಾಲೀಕನಿಂದ ಲೈಂಗಿಕ ಕಿರುಕುಳ

Webdunia
ಬುಧವಾರ, 20 ಫೆಬ್ರವರಿ 2019 (06:49 IST)
ಬೆಂಗಳೂರು : ಸಂದರ್ಶನಕ್ಕೆ ಬಂದ ಯುವತಿಯೊಬ್ಬಳ ಮೇಲೆ ಕಂಪೆನಿಯ ಮಾಲಿಕನೊಬ್ಬ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪೀಣ್ಯದ ನಿವಾಸಿ ಷಣ್ಮುಗಂ (55) ಇಂತಹ ಕೃತ್ಯ ಎಸಗಿದ ಕಂಪೆನಿ ಮಾಲೀಕ. ಈತ ಪೀಣ್ಯ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಸರವಣ ಎಂಜಿನಿಯರಿಂಗ್ವರ್ಕ್ಸ್ಕಂಪನಿ ಇಟ್ಟುಕೊಂಡಿದ್ದನು. ಈತನ ಕಂಪೆನಿಯಲ್ಲಿ ಈಗಾಗಲೇ 15 ಮಂದಿ ಕೆಲಸ ಮಾಡುತ್ತಿದ್ದು, ಇನ್ನೂ ಕೆಲಸಗಾರರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದನು.


 

ಹಿನ್ನಲೆಯಲ್ಲಿ ಜಾಹೀರಾತು ನೋಡಿ  ಕೆಲಸ ಕೇಳಿಸಿಕೊಂಡು ಬಂದಿದ್ದ ಯುವತಿಯನ್ನು ಸಂಬಳದ ಕುರಿತು ಚರ್ಚಿಸುವ ನೆಪದಲ್ಲಿ ಮನೆಗೆ ಕರೆಸಿಕೊಂಡು ''ನಿಮಗೆ ಕೇಳಿದಷ್ಟು ಸಂಬಳ ಕೊಡುತ್ತೇನೆ. ಮನೆಯಿಂದ ಕಂಪನಿಗೆ ಬರಲು ದ್ವಿಚಕ್ರ ವಾಹನ ಕೊಡಿಸುತ್ತೇನೆ ಎಂದು ಪುಸಲಾಯಿಸಿ ಆಕೆಯ ಜೊತೆ  ಅನುಚಿತವಾಗಿ ವರ್ತಿಸಿದ್ದಾನೆ.


 

ಆಗ ಭಯಬೀತಳಾದ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೋಷಕರಿಗೆ ವಿಷಯ ತಿಳಿಸಿ, ಪೊಲೀಸರಿಗೆ ದೂರು ನೀಡಿದ್ದರು. ಹಿನ್ನಲೆಯಲ್ಲಿ ಆರೋಪಿ ಕಂಪನಿ ಮಾಲೀಕನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ