ಇಸ್ಲಾಮಾಬಾದ್: ಸಿಂಧೂ ನದಿ ನೀರು ನಿಲ್ಲಿಸಿದ್ರೆ ನಿಮ್ಮ ಉಸಿರನ್ನೂ ನಿಲ್ಲಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಸೇನಾ ವಕ್ತಾರರ ಅಹ್ಮದ್ ಷರೀಫ್ ಬೆದರಿಕೆ ಹಾಕಿದ್ದಾನೆ.
ನಿನ್ನೆಯಷ್ಟೇ ಪ್ರಧಾನಿ ಮೋದಿ ರಾಜಸ್ಥಾನದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಪಾಕಿಸ್ತಾನಕ್ಕೆ ನಮ್ಮ ಸಿಂಧೂ ನದಿಯ ಹನಿ ನೀರೂ ಹರಿಯಲು ಬಿಡಲ್ಲ ಎಂದಿದ್ದರು. ಅವರ ಮಾತಿಗೆ ಪಾಕ್ ಸೇನಾ ವಕ್ತಾರ ಕೌಂಟರ್ ಕೊಟ್ಟಿದ್ದಾನೆ.
ಪಾಕಿಸ್ತಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅಹ್ಮದ್ ಷರೀಫ್ ಸಿಂಧೂ ನದಿ ಒಪ್ಪಂದ ರದ್ದಾಗಿರುವುದರ ಬಗ್ಗೆ ಪ್ರಸ್ತಾಪಿಸಿದ್ದಾನೆ. ಈ ವೇಳೆ ಭಾರತವೇನಾದರೂ ಸಿಂಧೂ ನದಿ ನಿಲ್ಲಿಸಿದರೆ ನಾವು ಅವರ ಉಸಿರು ಕಟ್ಟಿ ಹಾಕಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.
ಇದಕ್ಕೆ ಮೊದಲು ಉಗ್ರ ಹಫೀಜ್ ಸಯೀದ್ ಕೂಡಾ ಇದೇ ಮಾತನ್ನು ಹೇಳಿದ್ದ. ಹೀಗಾಗಿ ಪಾಕಿಸ್ತಾನದಲ್ಲಿ ಉಗ್ರರು ಮತ್ತು ಸೇನಾ ವಕ್ತಾರರ ಹೇಳಿಕೆ ಎರಡೂ ಒಂದೇ ರೀತಿಯದ್ದಾಗಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿತ್ತು. ಭಯೋತ್ಪಾದನೆ ಸಂಪೂರ್ಣವಾಗಿ ನಿಲ್ಲುವವರೆಗೂ ನೀರು ಹರಿಸಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟ ಸಂದೇಶ ನೀಡಿದೆ.