Select Your Language

Notifications

webdunia
webdunia
webdunia
webdunia

ಭಾರತೀಯ ಸೇನಾ ನೆಲೆ ಧ್ವಂಸಗೊಳಿಸಿರುವುದಾಗಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಪಾಕ್

Pakistan Army
ಇಸ್ಲಾಮಾಬಾದ್ , ಭಾನುವಾರ, 4 ಜೂನ್ 2017 (14:25 IST)
ಇಸ್ಲಾಮಾಬಾದ್: ಅಂತರಾಷ್ಟ್ರೀಯ ಗಡಿಭಾಗದಲ್ಲಿ  ಭಾರತೀಯ  ಸೇನಾ ನೆಲೆ ಧ್ವಂಸಗೊಳಿಸಿರುವುದಾಗಿ ಪಾಕಿಸ್ತಾನ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
 
ಗಡಿಭಾಗದ ಟಟ್ಟಾ ಪಾನಿ ಸೆಕ್ಟರ್ ಬಳಿ ಭಾರತೀಯ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯ ಐವರು ಯೋಧರನ್ನು ಹತ್ಯೆಗೈದಿರುವುದಾಗಿ ಪಾಕ್ ಹೇಳಿಕೊಂಡಿದ್ದು, ಇದೀಗ ಭಾರತೀಯ ಸೇನಾನೆಲೆ ಧ್ವಂಸ ಮಾಡಿರುವ ಬಗ್ಗೆ ಪಾಕ್ ಬಿಡುಗಡೆ ಮಾಡಿರುವ 27 ಸೆಕೆಂಡ್ ವಿಡಿಯೋದಲ್ಲಿ ತಿಳಿಸಿದೆ.
 
ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಈ ವಿಡಿಯೊ ಟ್ವೀಟ್ ಮಾಡಿದ್ದಾರೆ. ಆದರೆ ಭಾರತೀಯ ಸೇನಾಪಡೆ ಈ ವಿಡಿಯೋವನ್ನು ನಕಲಿ ಎಂದು ಹೇಳಿದೆ 
 
ಇತ್ತೀಚೆಗಷ್ಟೇ ಭಾರತೀಯ ಸೇನಾ ನೆಲೆ ಧ್ವಂಸಗೊಳಿಸಿರುವುದಾಗಿ ಆರೋಪಿಸಿ ಪಾಕ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು, ಆದರೆ ಅದು ನಕಲಿ ವಿಡಿಯೋ ಎಂದು ಭಾರತೀಯ ಸೇನಾ ಸ್ಪಷ್ಟನೆ ನೀಡಿತ್ತು. ಆದರೆ ಈ ವಿಡಿಯೋ ಕೂಡಾ ನಕಲಿ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಯೋಗಿ ಆದಿತ್ಯನಾಥ್‌ರಂತೆ ಸಿದ್ರಾಮಯ್ಯ ಸಾಲ ಮನ್ನಾ ಮಾಡಲಿ: ಅನಂತ್ ಕುಮಾರ್