Select Your Language

Notifications

webdunia
webdunia
webdunia
webdunia

ಆರ್ಟಿಕಲ್ 370 ರದ್ದು ವಿಚಾರದಲ್ಲಿ ಭಾರತದ ಪರ ನಿಂತ ಪಾಕ್ ನಾಯಕ

ಆರ್ಟಿಕಲ್ 370 ರದ್ದು ವಿಚಾರದಲ್ಲಿ ಭಾರತದ ಪರ ನಿಂತ ಪಾಕ್ ನಾಯಕ
ಪಾಕಿಸ್ತಾನ , ಸೋಮವಾರ, 2 ಸೆಪ್ಟಂಬರ್ 2019 (09:31 IST)
ಪಾಕಿಸ್ತಾನ : ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದರ ಕುರಿತು ಇದೀಗ ಪಾಕಿಸ್ತಾನದ ಎಂಕ್ಯುಎಂ ನ ನಾಯಕ ಅಲ್ತಾಫ್ ಹುಸೇನ್ ಭಾರತದ ಪರವಾಗಿ ಮಾತನಾಡಿದ್ದಾರೆ.




ಈ ವಿಚಾರವಾಗಿ ಇಡೀ ಪಾಕಿಸ್ತಾನವೇ ಭಾತರ ಹಾಗೂ ಪ್ರಧಾನಿ ಮೋದಿಯ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಪಾಕಿಸ್ತಾನದ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ (ಎಂಕ್ಯುಎಂ) ಸ್ಥಾಪಕ ಅಲ್ತಾಫ್ ಹುಸೇನ್, ಆರ್ಟಿಕಲ್ 370 ರದ್ದತಿ ಭಾರತದ ಆಂತರಿಕ ವಿಷಯ, ಇದರಲ್ಲಿ ಪಾಕಿಸ್ತಾನ ಮಧ್ಯಪ್ರವೇಶಿಸಬಾರದು. ಭಾರತೀಯರ ಬೆಂಬಲ ಪಡೆದೇ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.


ಅಲ್ಲದೇ  ಸಾರೇ ಜಹಾನ್ ಸೇ ಅಚ್ಚಾ ಹಾಡನ್ನು ಹೆಮ್ಮೆಯಿಂದ ಹಾಡಿದ ಅವರು, ಸರ್ಕಾರ ಹಾಗೂ ಸೇನೆ ಎರಡೂ 72 ವರ್ಷಗಳಿಂದ ಪಾಕಿಸ್ತಾನಿಯರನ್ನು ಕಾಶ್ಮೀರದ ವಿಷಯದಲ್ಲಿ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಳಕೆದಾರರಿಗಾಗಿ ಈ ಹೊಸ ಫೀಚರ್ ಗಳನ್ನು ಪರಿಚಯಿಸಿದ ವಾಟ್ಸ್ ಆ್ಯಪ್