ಪ್ರಧಾನಮಂತ್ರಿ ನವಾಜ್ ಷರೀಫ್ ನೇತೃತ್ವದ ಸರಕಾರ, ಜೈಷ್-ಎ-ಮೊಹಮ್ಮದ್ ಸಂಘಟನೆ ಸೇರಿದಂತೆ ಶಂಕಿತ 5100 ಉಗ್ರರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್(ಎಸ್‌ಬಿಪಿ)ದಲ್ಲಿ 1200 ಶಂಕಿತ ಉಗ್ರರ ಖಾತೆಗಳು ಪತ್ತೆಯಾಗಿದ್ದು, ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನೆ ನಿಗ್ರಹ ದಳ ಕಾಯ್ದೆ 1997ರ ಕಾಯ್ದೆ ಅನ್ವಯ 5100 ಉಗ್ರರ ಹಣಕಾಸಿನ ವಹಿವಾಟಿಗೆ ಕಡಿವಾಣ ಹಾಕಲಾಗಿದೆ. ಮೌಲಾನಾ ಮಸೂದ್ ಅಜರ್‌ನನ್ನು ಉಗ್ರರ ಎ ಗುಂಪಿನಲ್ಲಿ ಸೇರಿಸಲಾಗಿದೆ.
ಪಠಾನ್‌ಕೋಟ್ ಉಗ್ರರ ದಾಳಿಯಲ್ಲಿ ಮಸೂದ್ ಅಜರ್ ಕೈವಾಡವಿದೆ ಎಂದು ಭಾರತ ಸರಕಾರ ಆರೋಪಿಸಿದ ಹಿನ್ನೆಲೆಯಲ್ಲಿ ಮಸೂದ್ ಅಜರ್‌ನನ್ನು ಗೃಹಬಂಧನದಲ್ಲಿರಿಸಲಾಗಿದ್ದು ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ