ನವದೆಹಲಿ: ಕೃಷಿ ಕಾಯಿದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಾಹ್ಯ ಶಕ್ತಿಗಳ ಕೈವಾಡವಿದೆ ಎನ್ನುವುದಕ್ಕೆ ಪುರಾವೆಯೆಂಬಂತೆ ಜರ್ಮನಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆಯೊಂದರಲ್ಲಿ ಪಾಕ್ ಧ್ವಜ ಹಾರಿಸಲಾಗಿದೆ.
ಇತ್ತೀಚೆಗಷ್ಟೇ ವಿದೇಶೀ ಸೆಲೆಬ್ರಿಟಿಗಳು ಕೃಷಿ ಕಾಯ್ದೆ ವಿರೋಧಿಸಿ ಟೀಕೆಗೆ ಗುರಿಯಾಗಿದ್ದರು. ಇದೀಗ ಜರ್ಮನಿಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು, ಆ ಪ್ರತಿಭಟನೆಯಲ್ಲಿ ಪಾಕಿಸ್ತಾನದ ಧ್ವಜ ಅರಳಿಸಲಾಗಿದೆ. ಈ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಪ್ರತಿನಿಧಿಗಳು ಆಯೋಜಿಸಿದ್ದರು. ಹೀಗಾಗಿ ಇಲ್ಲಿ ಪಾಕ್ ಧ್ವಜ ಹಾರಿಸಿ ಕಾಂಗ್ರೆಸ್ ದೇಶದ್ರೋಹಿ ಕೆಲಸಕ್ಕೆ ಕುಮ್ಮಕ್ಕು ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.