Select Your Language

Notifications

webdunia
webdunia
webdunia
webdunia

ಮಾಲೀಕನ ಆರ್ಭಟಕ್ಕೆ ದರೋಡೆಕೋರರೇ ಎದ್ದುಬಿದ್ದು ಓಡಿ ಹೋದ್ರು...

ಮಾಲೀಕನ ಆರ್ಭಟಕ್ಕೆ ದರೋಡೆಕೋರರೇ ಎದ್ದುಬಿದ್ದು ಓಡಿ ಹೋದ್ರು...
ಫ್ಲೋರಿಡಾ , ಗುರುವಾರ, 22 ಜೂನ್ 2017 (16:53 IST)
ಫ್ಲೋರಿಡಾ:ದರೋಡೆ ಮಾಡಲೆಂದು ಹೊಂಚು ಹಾಕಿ, ಮಾರಕಾಸ್ತ್ರ, ಗನ್ ಗಳೊಂದಿಗೆ ಮನೆಯೊಂದಕ್ಕೆ ಎಂಟ್ರಿ ಕೊಟ್ಟ ದರೋಡೆಕೋರರು, ಮನೆ ಮಾಲೀಕನ ರೌದ್ರಾವತಾರಕ್ಕೆ ಭಯಭೀತರಾಗಿ ಎದ್ದುಬಿದ್ದು ಜೀವ ಉಳಿಸಿಕೊಂಡು ಓಡಿಹೋದ ಘಟನೆ ನಡೆದಿದೆ.
 
ಅಮೆರಿಕದ ಫ್ಲೋರಿಡಾದಲ್ಲಿ ಮನೆಯೊಂದಕ್ಕೆ ರಾತ್ರಿ ವೇಳೆ ಮೂವರು ದರೋಡೆಕೋರರ ಗುಂಪುಂದು ನುಗ್ಗಿದೆ. ಮನೆ ಮಾಲೀಕ ಇನ್ನೂ ನಿದ್ದೆಗೆ ಜಾರದೇ ಮನೆ ಲಾಂಜ್ ನಲ್ಲಿ ಕೂತಿದ್ದ. ಇದೇ ವೇಳೆ ಕಳ್ಳರು ಗನ್ ಹಿಡಿದು ಮನೆ ಒಳಗೆ ನುಗ್ಗಿದ್ದಾರೆ. ಕ್ಷಣಮಾತ್ರವೂ ಹೆದರದ ಮನೆ ಮಾಲೀಕ ಮನೆಯಲಿದ್ದ ಮಚ್ಚನ್ನು ತಂದು ಝಳಪಿಸಿದ್ದಾನೆ ನೋಡಿ. ಸಾಲದೆಂಬಂತೆ ದರೋಡೆಕೋರರ ಮೆಲೆಯೇ ಎಗರಿ ಅವರ ಬಳಿಯಿದ್ದ ಗನ್ ಕಿತ್ತುಕೊಂಡು ಅವರಿಗೆ ಫೈರ್ ಮಾಡಲು ಹೊರಟಿದ್ದಾನೆ.
 
ಮಾಲೀಕನ ರುದ್ರತಾಂಡವ ನೋಡಿ ಕಂಗಾಲಾದ ಕಳ್ಳರು ಬದುಕಿದರೆ ಸಾಕು ಎಂದು, ಎದ್ದು ಬಿದ್ದು ಹೋಡಿ ಹೋಗಿದ್ದಾರೆ. ಈ ಘಟನಾವಳಿಗಳು ಮನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  
 

Share this Story:

Follow Webdunia kannada

ಮುಂದಿನ ಸುದ್ದಿ

ಗ್ರೇಟರ್ ನೊಯ್ಡಾ ಗ್ಯಾಂಗ್‌ರೇಪ್ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್