ನೈಜಿರಿಯಾದ ಗ್ರಾಮವೊಂದರ ಜನರು ಹೊಟ್ಟೆ ಉಬ್ಬಿಸಿಕೊಂಡು ಒದ್ದಾಡುತ್ತಿದ್ದ ಹಾವನ್ನು ಕಂಡು ಅಚ್ಚರಿಗೊಂಡರು. ಇದು ಯಾವುದೋ ಪ್ರಾಣಿಯನ್ನು ತಿಂದಿರಬೇಕು ಎಂದುಕೊಂಡು ಹಿಂದೆ ಮುಂದೆ ನೋಡದೆ ಅದರ ಹೊಟ್ಟೆಯನ್ನು ಸೀಳಿದರು. ಬಳಿಕ ತಮ್ಮ ದುಡುಕಿನ ಕೃತ್ಯಕ್ಕೆ ಪಶ್ಚಾತಾಪ ಪಡುವ ಸರದಿ ಅವರದಾಯಿತು. ಅದರ ಹೊಟ್ಟೆಯಲ್ಲಿದ್ದುದು ನೂರಕ್ಕೂ ಹೆಚ್ಚು ಮೊಟ್ಟೆಗಳು.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು 2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಹೊಟ್ಟೆ ಉಬ್ಬಿ ಒದ್ದಾಡುತ್ತಿದ್ದ ಹಾವನ್ನು ಕತ್ತರಿಸಿದಾಗ ಸಿಕ್ಕಿದ್ದೇನು? ವೈರಲ್ ವಿಡಿಯೋ