Select Your Language

Notifications

webdunia
webdunia
webdunia
webdunia

ಉತ್ತರ ಕೊರಿಯಾ: ಎರಡು ಖಂಡಾಂತರ ಕ್ಷಿಪಣಿ ಉಡಾವಣೆ

ಉತ್ತರ ಕೊರಿಯಾ: ಎರಡು ಖಂಡಾಂತರ ಕ್ಷಿಪಣಿ ಉಡಾವಣೆ
ಉತ್ತರ ಕೊರಿಯಾ , ಬುಧವಾರ, 15 ಸೆಪ್ಟಂಬರ್ 2021 (14:34 IST)
ಸೋಲ್ : ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲಿ ಎರಡು ಖಂಡಾಂತರ ಕ್ಷಿಪಣಿಗಳನ್ನು ಬುಧವಾರ ಉಡಾಯಿಸಿದೆ. ಉತ್ತರ ಕೊರಿಯಾದ ಮಧ್ಯಭಾಗದಿಂದ ಉಡಾಯಿಸಲಾದ ಈ ಎರಡು ಕ್ಷಿಪಣಿಗಳು ಕೊರಿಯನ್ ಪರ್ಯಾಯ ದ್ವೀಪದ ಪೂರ್ವ ಕರಾವಳಿಯ ನೀರಿನ ಕಡೆಗೆ ಹಾರಿದವು ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕೊರಿಯಾದ ಈ ಉಡಾವಣೆಗಳ ಕುರಿತು ದಕ್ಷಿಣ ಕೊರಿಯಾ ಮತ್ತು ಅಮೆರಿಕ ಗುಪ್ತಚರ ಅಧಿಕಾರಿಗಳು ಪರಿಶೀಲನೆ ಮತ್ತು ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರ ಬೆನ್ನಲ್ಲೇ ದಕ್ಷಿಣ ಕೊರಿಯಾ ತನ್ನ ಕಣ್ಗಾವಲನ್ನು ಹೆಚ್ಚಿಸಿದೆ.
ಜಪಾನ್ ಮತ್ತು ಕೊರಿಯನ್ ಪರ್ಯಾಯ ದ್ವೀಪದ ನಡುವೆ ಇರುವ ಜಪಾನಿನ ವಿಶೇಷ ಆರ್ಥಿಕ ವಲಯದ ಹೊರಗೆ ಎರಡು ವಸ್ತುಗಳು ಬಂದು ಬಿದ್ದಿದ್ದನ್ನು ಜಪಾನ್ನ ಕರಾವಳಿ ಪಡೆ ಖಚಿತಪಡಿಸಿದೆ. ಇದರಿಂದ ಯಾವುದೇ ಹಡಗುಗಳು ಅಥವಾ ವಿಮಾನಗಳಿಗೆ ಹಾನಿಯಾದ ವರದಿ ಆಗಿಲ್ಲ ಎಂದು ಕರಾವಳಿ ಪಡೆ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿ.ಕೆ. ಶಿವಕುಮಾರ್ ಗೆ ಸುಳ್ಯ ಕೋರ್ಟ್ ನಿಂದ ವಾರಂಟ್ ಜಾರಿ : ಏನಿದು ಪ್ರಕರಣ?