Select Your Language

Notifications

webdunia
webdunia
webdunia
Thursday, 10 April 2025
webdunia

ನ್ಯೂಜಿಲೆಂಡ್ ಪ್ರಧಾನಿ ಹಠಾತ್ ರಾಜೀನಾಮೆ ಘೋಷಣೆ

ನ್ಯೂಜಿಲೆಂಡ್
ನವದೆಹಲಿ , ಗುರುವಾರ, 19 ಜನವರಿ 2023 (10:35 IST)
ವೆಲ್ಲಿಂಗ್ಟನ್ : ನ್ಯೂಜಿಲೆಂಡ್ನ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಮುಂದಿನ ತಿಂಗಳು ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.

ನಾನು ಅಧಿಕಾರ ನಿರ್ವಹಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ರಾಜೀನಾಮೆ ನಿರ್ಧಾರ ನನ್ನದೇ ಆಗಿದೆ. ದೇಶವನ್ನು ಮುನ್ನಡೆಸುವುದು ಅತ್ಯಂತ ವಿಷೇಷವಾದ ಕೆಲಸ. ಹೀಗಾಗಿ ರಾಜೀನಾಮೆ ನೀಡಲು ಇದು ಉತ್ತಮ ಸಮಯವಾಗಿದೆ ಎಂದು ಅರ್ಡೆರ್ನ್ ತಿಳಿಸಿದ್ದಾರೆ.

ಮುಂದಿನ ಫೆಬ್ರವರಿ 2 ರಂದು ತಾವು ರಾಜೀನಾಮೆ ನೀಡುವುದಾಗಿ ಅರ್ಡೆರ್ನ್ ತಿಳಿಸಿದ್ದಾರೆ. ಅಕ್ಟೋಬರ್ 14 ರಂದು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ತಾವು ಚುನಾವಣಾ ಸಂಸದರಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮೋದಿ ಮತ ಭೇಟೆ