ಇಮ್ರಾನ್ ಖಾನ್ ಪದಗ್ರಹಣ ಕಾರ್ಯಕ್ರಮಕ್ಕೆ ಭಾರತೀಯ ಕ್ರಿಕೆಟಿಗ!

Webdunia
ಗುರುವಾರ, 2 ಆಗಸ್ಟ್ 2018 (10:09 IST)
ಇಸ್ಲಾಮಾಬಾದ್: ಪಾಕಿಸ್ತಾನ ರಾಷ್ಟ್ರೀಯ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿ ಪ್ರಧಾನಿ ಪಟ್ಟದತ್ತ ಕಾಲಿಟ್ಟಿರುವ ಮಾಜಿ ಕ್ರಿಕೆಟಿಗ, ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ಬಹುಮತವಿಲ್ಲದಿದ್ದರೂ ಪಕ್ಷೇತರರ ಸಹಾಯದೊಂದಿಗೆ ಇಮ್ರಾನ್ ಅಧಿಕಾರಕ್ಕೇರಲಿದ್ದಾರೆ. ಆಗಸ್ಟ್ 14 ರಂದು ಪಾಕಿಸ್ತಾನ ಅಧ್ಯಕ್ಷರ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಇಮ್ರಾನ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಇಮ್ರಾನ್ ಆಹ್ವಾನಿಸಲಿದ್ದಾರೆ ಎಂಬ ವರದಿಯಿತ್ತು. ಆದರೆ ಪ್ರಧಾನಿ ಮೋದಿ ಸೇರಿದಂತೆ ಸಾರ್ಕ್ ನಾಯಕರು ಆಗಮಿಸುತ್ತಾರೋ ಇಲ್ಲವೋ, ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.

ಪಂಜಾಬ್ ಸರ್ಕಾರದ ಸಚಿವರೂ ಆಗಿರುವ ನವಜೋತ್ ಸಿಂಗ್ ಸಿದು ಇಮ್ರಾನ್ ಖಾನ್ ಸಮಕಾಲೀನ ಕ್ರಿಕೆಟಿಗರು. ಸಿದುಗೆ ಪಾಕ್ ನಿಂದ ಅಧಿಕೃತ ಆಹ್ವಾನ ಬಂದಿದ್ದು, ಇದನ್ನು ಅವರು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇಮ್ರಾನ್ ಖಾನ್ ವಿಶ್ವಾಸಾರ್ಹ ನಾಯಕ ಎಂದು ನವಜೋತ್ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ಭಯೋತ್ಪಾದನಾ ದಾಳಿ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಹೆದರಿ ನಾಲ್ಕನೇ ಫ್ಲೋರ್‌ನಿಂದ ಹಾರಿದ್ರಾ ಯುವತಿ

ಮಹಿಳೆಯರಿರುವುದು ಗಂಡನ ಜತೆ ಮಲಗುವುದಕ್ಕೆ: ಕೇರಳ ಸಿಪಿಎಂ ಮುಖಂಡನ ವಿವಾದಾತ್ಮಕ ಹೇಳಿಕೆ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮುಂದಿನ ಸುದ್ದಿ
Show comments