Select Your Language

Notifications

webdunia
webdunia
webdunia
webdunia

ಸೊಸೆ ಮೇಲೇ ಕಣ್ಣು ಹಾಕಿದ ಮಾವನಿಗೆ ಅತ್ತೆ ಮಾಡಿದ್ದೇನು ಗೊತ್ತಾ..?

ಸೊಸೆ ಮೇಲೇ ಕಣ್ಣು ಹಾಕಿದ ಮಾವನಿಗೆ ಅತ್ತೆ ಮಾಡಿದ್ದೇನು ಗೊತ್ತಾ..?
ಇಸ್ಲಾಮಾಬಾದ್ , ಸೋಮವಾರ, 5 ಜೂನ್ 2017 (17:11 IST)
ಕಾಮತೃಷೆ ತೀರಿಸಿಕೊಳ್ಳಲು ಸೊಸೆ ಮೇಲೆಯೇ ಎರಗಿದ್ದ ಕಾಮುಕ ಗಂಡನನ್ನ ಪತ್ನಿಯೇ ಗುಂಡಿಟ್ಟು ಕೊಂದಿರುವ ಘಟನೆ ಪಾಕಿಸ್ತಾನದಿಂದ ವರದಿಯಾಗಿದೆ.

ಖೈಬರ್ ಪಖ್ತುಂಖ್ವಾದ ಶಾಂಗ್ಲಾ ಗ್ರಾಮದ ಬೇಗಂ ಬಿಬಿ, ಸಂಬಂಧಗಳಿಗೆ ಬೆಲೆಕೊಡದ ಪತಿ ಗುಲ್ಬರ್ ಖಾನ್`ನನ್ನ ಕೊಂದಿದ್ದಾಳೆ. ಬೇಗಂ ಪುತ್ರ ಯೋಧನಾಗಿದ್ದು, ಗಡಿ ಕಾಯುತ್ತಿದ್ದಾನೆ. ಇದೇ ಸಂದರ್ಭ ಬಳಸಿಕೊಂಡ ಈಕೆಯ ಪತಿ, ಮಗನ ಹೆಂಡತಿ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ 3 ತಿಂಗಳಿಂದ ಕಾಮುಕ ಮಾವ ಲೈಂಗಿಕ ಹಲ್ಲೆ ನಡೆಸಿದ್ದಾನೆ. ಸೊಸೆ ಮೇಲೆ ಗಂಡನ ದೌರ್ಜನ್ಯ ಕಂಡು ಬೇಸತ್ತಿದ್ದ ಪತ್ನಿ ಆತ ಮಲಗಿದ್ದ ಸಂದರ್ಭ ಸೊಸೆಯ ಸಹಾಯ ಪಡೆದು ಪಿಸ್ತೂಲ್`ನಿಂದ ಗುಂಡು ಹಾರಿಸಿ ಕೊಂದಿದ್ದಾಳೆ. ನನ್ನ ಮಗ ಇಲ್ಲದ ಸಮಯ ನೋಡಿ ಕಳೆದ 3 ತಿಂಗಳಿಂದ ಸೊಸೆಯನ್ನ ಬಲವಂತವಾಗಿ ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದ. ಆತನ ಹೋಈನ ಕೃತ್ಯದಿಂದ ಬೇಸತ್ತು ಕೊಂದಿರುವುದಾಗಿ ಬೇಗಂ ಹೇಳಿಕೆ ನೀಡಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಸುದೀರ್ಘ ಗೈರುಹಾಜರಿಯ ನಂತ್ರ ಕಲಾಪಕ್ಕೆ ಹಾಜರಾದ ಅಂಬಿ