Select Your Language

Notifications

webdunia
webdunia
webdunia
webdunia

ರಷ್ಯಾದ ಮಿಲಿಟರಿ ವಿಮಾನ ನಿಗೂಢ ನಾಪತ್ತೆ

ರಷ್ಯಾ
ಸೋಚಿ , ಭಾನುವಾರ, 25 ಡಿಸೆಂಬರ್ 2016 (11:12 IST)
ರಷ್ಯಾದ ಮಿಲಿಟರಿ ವಿಮಾನ ನಾಪತ್ತೆಯಾಗಿದ್ದು ಇದರಲ್ಲಿ ಒಟ್ಟು 91 ಮಂದಿ ಪ್ರಯಾಣಿಕರಿದ್ದರು.

ರಷ್ಯಾದ ಸೋಚಿಯಿಂದ ಸಿರಿಯಾದ ಲಟಾಕಿಗೆ ತೆರಳುತ್ತಿದ್ದ ಟಿಯು 154 ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ರಾಡರ್ ಸಂಪರ್ಕ ಕಡಿದುಕೊಂಡಿತು. 
 
ವಿಮಾನದಲ್ಲಿ ಪತ್ರಕರ್ತರು, ಸೇನಾ ಸಿಬ್ಬಂದಿ ಮತ್ತು ರಷ್ಯಾದ ಸಶಸ್ತ್ರ ಪಡೆಗಳ ಅಧಿಕೃತ ಸೇನೆ ವಾದ್ಯಮೇಳ ಅಲೆಕ್ಸಾಂಡರ್ ಎನ್ಸೆಂಬಲ್ ಸದಸ್ಯರು, ವಿಮಾನ ಸಿಬ್ಬಂದಿ ಸೇರಿದಂತೆ 91 ಜನರಿದ್ದರು ಎನ್ನಲಾಗುತ್ತಿದೆ.
 
ವಿಮಾನ ಪತನವಾಗಿದೆಯೇ, ರಾಡರ್ ಸಂಪರ್ಕ ಕಳೆದುಕೊಂಡರೂ ಪ್ರಯಾಣವನ್ನು ಮುಂದುವರೆಸಿದೆಯೇ ಅಥವಾ ಭಯೋತ್ಪಾದಕರ ದಾಳಿಗೊಳಗಾಗಿದೆಯೋ ಎಂದು ರಷ್ಯಾ ಅಧಿಕಾರಿಗಳು ವಿಮಾನದ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ವರು ಪತ್ರಕರ್ತರ ಸಜೀವ ದಹನಕ್ಕೆ ಯತ್ನ