Webdunia - Bharat's app for daily news and videos

Install App

ವಲಸಿಗರಿದ್ದ ಹಡಗು ಮುಳುಗಡೆ – 79 ಮಂದಿ ಜಲಸಮಾಧಿ!

Webdunia
ಶುಕ್ರವಾರ, 16 ಜೂನ್ 2023 (10:37 IST)
ಅಥೆನ್ಸ್ : ಅಗತ್ಯಕ್ಕಿಂತ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದ ಹಡಗು ಮುಳುಗಿ 79 ಮಂದಿ ಜಲಸಮಾಧಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿರುವ ಘಟನೆ ಗ್ರೀಸ್ನ ಕರಾವಳಿ ಭಾಗದಲ್ಲಿ ನಡೆದಿದೆ.
 
ಜೂನ್ 14ರಂದು ರಾತ್ರಿ ಗ್ರೀಸ್ ಕರಾವಳಿಯಿಂದ ಯುರೋಪ್ನತ್ತ ಹೊರಟಿದ್ದ ಹಡಗಿನಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದರು. ಮೀನುಗಾರಿಕೆ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನ ಕೂರಿಸಿದ್ದರಿಂದ ಹಡಗು ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. 

ಯುರೋಪಿಯನ್ ರಕ್ಷಣಾ ತಂಡದ ಪ್ರಕಾರ ಸುಮಾರು 750 ಮಂದಿ ಹಡಗಿನಲ್ಲಿದ್ದರು ಎನ್ನಲಾಗಿದೆ. ಆದ್ರೆ ಯುಎನ್ ವಲಸಿಗ ಏಜೆನ್ಸಿ 400 ಮಂದಿ ಹಡಗಿನಲ್ಲಿದ್ದರು ಎಂದು ಹೇಳಿದೆ. ಹಡಗಿನಲ್ಲಿದ್ದ ಹೆಚ್ಚಿನ ಸಂಖ್ಯೆಯ ವಲಸಿಗರು ಈಜಿಪ್ಟ್, ಸಿರಿಯಾ ಮತ್ತು ಪಾಕಿಸ್ತಾನದಿಂದ ಬಂದವರು ಎಂದು ಹೇಳಲಾಗಿದೆ.

ಗ್ರೀಸ್ನಲ್ಲಿ ನಡೆದ ಈ ಹಡಗು ದುರಂತವನ್ನು ಪ್ರಸಕ್ತ ವರ್ಷದ ಮಹಾ ದುರಂತ ಎಂದೇ ಹೇಳಲಾಗುತ್ತಿದೆ. ಸಮುದ್ರದಲ್ಲಿ ಮುಳುಗಿದ್ದ 104ಕ್ಕೂ ಹೆಚ್ಚು ಜನರನ್ನ ರಕ್ಷಿಸಲಾಗಿದೆ. ಇನ್ನೂ ಸಾಕಷ್ಟು ಮಂದಿ ನೀರಿನಲ್ಲಿ ಮುಳುಗಿದ್ದು ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶವಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ವ್ಯಕ್ತಿ ಶುಂಠಿಯನ್ನು ತೊಳೆಯುವುದು ನೋಡಿದ್ರೆ, ನೀವು ತೆಗೆದುಕೊಳ್ಳುವುದೇ ನಿಲ್ಲಿಸ್ತೀರಾ

ಪಿಂಚಣಿ ಯೋಜನೆಗಳಿಂದ ಕೈಬಿಟ್ಟವರ ಬಗ್ಗೆ ಡಿಸಿಎಂ ಜಿ ಪರಮೇಶ್ವರ್‌

ವಾಕ್ ಸ್ವಾತಂತ್ರ್ಯದ ಮೇಲೆ ಮೋದಿ ಸರ್ಕಾರ ದಾಳಿ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ವಂದೇ ಮಾತರಂ ಎರಡೇ ಚರಣ ಹಾಡ್ತೀನಿ ಎನ್ನುವ ಕೆಪಿಸಿಸಿ ಅಧ್ಯಕ್ಷರದ್ದು ಅಸಂಬದ್ಧ ಮಾತು: ಮಹೇಶ್ ಟೆಂಗಿನಕಾಯಿ

ಜೈಲು ಹಕ್ಕಿಯಾದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ಸ್ಥಳಾಂತರಿಸಲು ಸುಪ್ರೀಂ ಅಸ್ತು

ಮುಂದಿನ ಸುದ್ದಿ
Show comments