Select Your Language

Notifications

webdunia
webdunia
webdunia
webdunia

ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ-ಆರ್ಟ್ ಆಫ್ ಲೀವಿಂಗ್‌ನ ಮುಂದಿನ ವಿಶ್ವ ಸಾಂಸ್ಕೃತಿಕ ಉತ್ಸವ, 2018ರ ಸ್ಥಳ

ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ-ಆರ್ಟ್ ಆಫ್ ಲೀವಿಂಗ್‌ನ ಮುಂದಿನ ವಿಶ್ವ ಸಾಂಸ್ಕೃತಿಕ ಉತ್ಸವ, 2018ರ ಸ್ಥಳ
ಮೆಲ್ಬೋರ್ನ್ , ಬುಧವಾರ, 7 ಸೆಪ್ಟಂಬರ್ 2016 (20:45 IST)
ಬೆಂಗಳೂರು: ಆಸ್ಟ್ರೇಲಿಯಾದ ವಿಕ್ಟೋರಿಯಾದ ಮಾಜಿ ಪ್ರೀಮಿಯರರಾದ ಎಡ್ವರ್ಡ್ ನಾರ್ಮನ್ ಬೆಯ್ಲಿ ಆರ್ಟ್ ಆಫ್ ಲೀವಿಂಗ್‌ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರರನ್ನು 2018ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಮುಂದಿನ ವಿಶ್ವ ಸಾಂಸ್ಕೃತಿಕ ಉತ್ಸವ ಆಚರಿಸಲು ಆಹ್ವಾನ ನೀಡಿದರು. ಆಸ್ಟ್ರೇಲಿಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಬೇಕೆಂದೂ ಬೇಯ್ಲಿಯವರು ಗುರುದೇವರಿಗೆ ಆಹ್ವಾನವಿತ್ತರು. 
 
ಆರು ತಿಂಗಳ ಹಿಂದೆ ಜಗತ್ತು ವಿಶ್ವದ ಅತೀ ದೊಡ್ಡ ಸಾಂಸ್ಕೃತಿಕ ಮೇಳವಾದ ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಕಂಡಿತು. ದೆಹಲಿಯಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಸಮ್ಮೇಳನದಲ್ಲಿ ಬೇಯ್ಲಿ ಭಾಗವಹಿಸಿದ್ದರು. ಸಮ್ಮೇಳನದ ಗಾತ್ರ ಮತ್ತು ಗುರುದೇವರು ವಿಶ್ವಶಾಂತಿಗಾಗಿ ನಡೆಸುತ್ತಿರುವ ಯತ್ನವನ್ನು ಕಂಡು ಮೆಚ್ಚಿದ ಅನೇಕ ವಿಶ್ವ ನಾಯಕರು ಗುರುದೇವರು ಅವರ ದೇಶಗಳಿಗೂ ಭೇಟಿ ನೀಡಿ ಅವರ ದೇಶಗಳ ಸಂಸತ್ತನ್ನು ಉದ್ದೇಶಿಸಿ ಮಾತನಾಡಬೇಕೆಂದು ಆಹ್ವಾನಿಸಿದರು.

webdunia


ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಒತ್ತಡ ನಿವಾರಣೆ ಮತ್ತು ಘರ್ಷಣೆಗಳ ನಿವಾರಣೆಯಲ್ಲಿ ಜಗದಾದ್ಯಂತ ಗುರುದೇವರು ನಿರ್ವಹಿಸಿದ ಪಾತ್ರವನ್ನು ಬ್ರಿಟನ್, ಕೊಲಂಬಿಯಾ, ಆಸ್ಟ್ರೇಲಿಯಾ , ಜರ್ಮನಿ, ಅಮೆರಿಕ, ಮಧ್ಯಕೊಲ್ಲಿ ಮತ್ತು ಇತರೆ ದೇಶಗಳ ರಾಜಕೀಯ ನಾಯಕರು ಬಹಳವಾಗಿ ಮೆಚ್ಚಿದ್ದರು. ಆರು ತಿಂಗಳ ನಂತರ ಬೇಯ್ಲಿ ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್ ಕೇಂದ್ರಕ್ಕೆ ಬಂದು ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಭೇಟಿ ಮಾಡಿದರು. 
 
2016ರ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಜಗತ್ತಿನ ಎಲ್ಲೆಡೆಯಿಂದಲೂ ಬಂದಿದ್ದ 3.75 ಮಿಲಿಯನ್ ಜನರು ಭಾಗವಹಿಸಿದ್ದರು. 150 ದೇಶಗಳಿಂದ ಬಂದಿದ್ದ ಇವರೆಲ್ಲರೂ ಸಾಂಸ್ಕೃತಿಕ ಮತ್ತು ಧರ್ಮದ ವೈವಿಧ್ಯತೆ ಕೊಂಡಾಡಿದರಲ್ಲದೇ ವಿಶ್ವವು ಒಂದೇ ಕುಟುಂಬ ಎಂಬ ತತ್ವವನ್ನೂ ಮೆರೆದರು.  100 ದೇಶಗಳಿಂದ ಬಂದಿದ್ದ 37,000 ಕಲಾವಿದರು ತಮ್ಮ ದೇಶಗಳ ಪರಂಪರೆಯನ್ನು, ಸಂಗೀತವನ್ನು ಮತ್ತು ನೃತ್ಯವನ್ನು ಜಾಗತಿಕ ಸಾಂಸ್ಕೃತಿಕ ವೇದಿಕೆಯ ಮೇಲೆ ಪ್ರದರ್ಶಿಸಿದರು. 188 ದೇಶಗಳಲ್ಲಿ, 767, 436 ಸ್ಥಳಗಳಲ್ಲಿ ಈ ಉತ್ಸವದ ನೇರ ಜಾಲ ಪ್ರಸಾರವನ್ನು ಜನರು ವೀಕ್ಷಿಸಿದರು.
webdunia

 
ಪ್ರಪಂಚದ ಎಲ್ಲಾ ಸಂಸ್ಕೃತಿಗಳಿಗೆ ಹಾಗೂ ಪರಂಪರೆಗಳಿಗೆ ಒಂದು ಸಾಮಾನ್ಯ ಸಮ್ಮಿಳನ ಕುಂಭವಾಗುವ ಕಾರ್ಯವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮೊಟ್ಟ ಮೊದಲ ಸಲ ನಿರ್ವಹಿಸುತ್ತಿಲ್ಲ. ಎಲ್ಲ ಒಳಿತನ್ನು ಬಯಸುವ , ಇಡೀ ಮಾನವತೆಯು ಒಂದೇ ಮತ್ತು ಸಮಗ್ರವಾದ ಸಂಸ್ಕೃತಿಯು ಎಲ್ಲರ ಬಳಿಯೂ ತಲುಪುವಂತಾಗಬೇಕು ಎಂದು ಬಯಸುವ ಎಲ್ಲರಿಗೂ ಸಂಸ್ಥೆಯು ಒಂದು ಸಾಮಾನ್ಯವಾದ ವೇದಿಕೆ ಕಲ್ಪಿಸಿಕೊಟ್ಟಿದೆ.

2011ರಲ್ಲಿ 150 ದೇಶಗಳಿಂದ ಬಂದಿದ್ದ 70,000 ಜನರು ಬರ್ಲಿನ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ಸೇರಿ ಆರ್ಟ್ ಆಫ್ ಲೀವಿಂಗ್‌ನ 30 ದೇಶಗಳ ವಾರ್ಷಿಕೋತ್ಸವ ಸಂಭ್ರಮವನ್ನು ವಿಶ್ವಶಾಂತಿಗಾಗಿ ಧ್ಯಾನ, ಜಗತ್ತಿನ ಎಲ್ಲಾ ಭಾಗಗಳಿಂದ ಗ್ರಾಮೀಣ ನೃತ್ಯ ಪ್ರದರ್ಶನ ಮತ್ತು ಸಂಗೀತ  ಪ್ರದರ್ಶನದ ಮೂಲಕ ಆಚರಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಶರಿಯತ್ ಕೋರ್ಟ್‌ಗಳನ್ನು ನಿವಾರಿಸಿ: ಸುಪ್ರೀಂಕೋರ್ಟ್‌ಗೆ ಮುಸ್ಲಿಂ ವಕೀಲೆ ಮನವಿ