Select Your Language

Notifications

webdunia
webdunia
webdunia
webdunia

ಕೈಗಳಿಲ್ಲದಿದ್ದರೂ ಪೈಲಟ್ ಆದ ಛಲಗಾರ್ತಿ

armless
ಅರಿಜೋನಾ , ಬುಧವಾರ, 1 ಜುಲೈ 2015 (11:35 IST)
ಜೀವನದಲ್ಲಿ ಎದುರಾಗುವ ಸಣ್ಣ ಸಣ್ಣ ಕಷ್ಟಗಳಿಗೆ ಸೋತು ಖಿನ್ನರಾಗಿ ಕುಳಿತುಕೊಳ್ಳುತ್ತೇವೆ ನಾವು. ಆದರೆ ಪರಿಶ್ರಮದ ಮುಂದೆ ಎಲ್ಲವೂ ಸೋಲುತ್ತದೆ ಎಂದು ಜಗತ್ತಿಗೆ ತೋರಿಸುತ್ತಾರೆ ಕೆಲವರು. ಅಂತವರ ಸಾಲಿಗೆ ಸೇರುತ್ತಾಳೆ ಈ ಯುವತಿ.














ಯಾವುದೇ ವಾಹನವಾಗಲಿ, ವಿಮಾನವಾಗಲಿ ಚಲಾಯಿಸಲು ಕೈಗಳು ಅವಶ್ಯ ತಾನೇ? ಆದರೆ ಈ ಯುವತಿ ಅದನ್ನು ಸುಳ್ಳಾಗಿಸಿದ್ದಾಳೆ.
 
ಅಮೇರಿಕಾದ ಅರಿಜೋನಾ ನಿವಾಯಿ ಜೆಸ್ಸಿಕಾ ಕಾಕ್ಸ್ ಕಾಲಿನಿಂದಲೇ ವಿಮಾನ ಚಲಾಯಿಸಿ ದಂಗು ಬಡಿಸಿದ್ದಾಳೆ.
 
ಕೈಗಳಿಲ್ಲದೇ ಹುಟ್ಟಿದ ಜೆಸ್ಸಿಕಾಗೆ ವಿಮಾನ ಚಾಲಕಿಯಾಗಬೇಕೆಂಬ ಆಶೆ ಹುಟ್ಟಿಕೊಂಡಿದೆ. ಕೈಗಳಿಲ್ಲವೆಂಬ ಚಿಂತೆಯಲ್ಲಿ ತನ್ನ ಕನಸನ್ನು ಮರೆತು ಬಿಡಲು ನಿರ್ಧರಿಸಿಲ್ಲ ಆಕೆ. ಕಾಲಿನಿಂದಲೇ ವಿಮಾನವನ್ನು ಚಲಾಯಿಸುವ ಪಣ ತೊಟ್ಟಿದ್ದಾಳೆ. ಅಂತೆಯೇ ಸತತ ಪರಿಶ್ರಮ, ಛಲದಿಂದ ಅದನ್ನೀಗ ಆಕೆ ಸಾಧಿಸಿದ್ದಾಳೆ. ಈಗ ಆಕೆ ನುರಿತ ಪೈಲಟ್ ಎನಿಸಿಕೊಂಡಿದ್ದಾಳೆ
 
ಕಾಲಿನಲ್ಲಿ ವಿಮಾನ ಹಾರಿಸಿ 2008 ರಲ್ಲಿ ಗಿನ್ನಿಸ್ ದಾಖಲೆ ಪುಸ್ತಕಕ್ಕೆ ತನ್ನ ಹೆಸರನ್ನು ಬರೆಯಿಕೊಂಡಿದ್ದ ಜೆಸ್ಸಿಕಾ ತನ್ನಂತೆ ಅಂಗವೈಕಲ್ಯವನ್ನು ಹೊಂದಿರುವವರಿಗೆ ಪ್ರೇರಣೆ ನೀಡುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾಳೆ. 

Share this Story:

Follow Webdunia kannada