Webdunia - Bharat's app for daily news and videos

Install App

ಭಾರತ–ಪಾಕ್‌ ಯುದ್ಧಕ್ಕೆ ಮಧ್ಯಸ್ಥಿಕೆ ನಮ್ಮದೇ: ಟ್ರಂಪ್‌ ಪರ ಮಾರ್ಕೊ ರುಬಿಯೊ ಬ್ಯಾಟಿಂಗ್‌

Sampriya
ಶುಕ್ರವಾರ, 8 ಆಗಸ್ಟ್ 2025 (12:12 IST)
Photo Credit X
ನ್ಯೂಯಾರ್ಕ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಿದ್ದೇ ನಾನು ಎಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಸಾಕಷ್ಟು ಬಾರಿ ಹೇಳಿದ್ದರು. ಈಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೂ ಟ್ರಂಪ್‌ ಪರ ಬ್ಯಾಟಿಂಗ್‌ ಮಾಡಿದ್ಧಾರೆ. 

ಭಾರತ ಮತ್ತು ಪಾಕ್‌ ಯುದ್ಧದ ಮಧ್ಯಸ್ಥಿಕೆಯಲ್ಲಿ ಅಮೆರಿಕಾ ಕೂಡ ನೇರವಾಗಿ ಭಾಗಿಯಾಗಿತ್ತು. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಪರಮಾಣು ಸಶಸ್ತ್ರ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿತು ಎಂದು ರುಬಿಯೊ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನದ ವೇಳೆ ರುಬಿಯೊ, ಟ್ರಂಪ್‌ ಹೇಳಿಕೆಯನ್ನು ಪುನರುಚ್ಚರಿಸಿದ್ದು, ಟ್ರಂಪ್ ಶಾಂತಿಗೆ ಬದ್ಧರಾಗಿದ್ದಾರೆ ಮತ್ತು ಶಾಂತಿಯ ಅಧ್ಯಕ್ಷರೂ ಆಗಿದ್ದಾರೆ ಎಂದು ಕೊಂಡಾಡಿದ್ದಾರೆ

ಇತ್ತೀಚೆಗೆ ಕಾಂಬೋಡಿಯಾ –ಥಾಯ್ಲೆಂಡ್, ಅಜರ್‌ಬೈಜಾನ್– ಅರ್ಮೇನಿಯಾ ಸೇರಿದಂತೆ, 30 ವರ್ಷಗಳಿಂದ ನಡೆಯುತ್ತಿರುವ ಡಿಆರ್‌ಸಿ (ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ)-ರುವಾಂಡಾ ನಡುವೆ ಶಾಂತಿ ಸ್ಥಾಪಿಸಿ ಕದನ ವಿರಾಮಕ್ಕೆ ಸಹಿ ಹಾಕಿಸಲು ಸಾಧ್ಯವಾಯಿತು ಎಂದು ರುಬಿಯೊ ಹೇಳಿದ್ದಾರೆ.  <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: ಕಳೇಬರಹ ಶೋಧ ಪ್ರಕರಣಕ್ಕೆ ಹೊಸ ಟ್ವಿಸ್ಟ್‌, 13ನೇ ಪಾಯಿಂಟ್ ಬಿಟ್ಟು ಹೊಸ ಸ್ಥಳದತ್ತ ಎಸ್‌ಐಟಿ

ಶೋಧ ಮುಕ್ತಾಯ ನಂತರವೂ ಗನ್‌ಮ್ಯಾನ್‌ ಭದ್ರತೆ ಕೊಡಿ: ಎಸ್‌ಐಟಿ ಮುಂದೆ ದೂರುದಾರನ ಬೇಡಿಕೆ

ಭಾರತ–ಪಾಕ್‌ ಯುದ್ಧಕ್ಕೆ ಮಧ್ಯಸ್ಥಿಕೆ ನಮ್ಮದೇ: ಟ್ರಂಪ್‌ ಪರ ಮಾರ್ಕೊ ರುಬಿಯೊ ಬ್ಯಾಟಿಂಗ್‌

ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ್ಯ: ರಾಹುಲ್‌ ಗಾಂಧಿ ಪ್ರತಿಭಟನೆಗೆ ಎಚ್‌ಡಿಕೆ ಕಿಡಿ

ಕರಾವಳಿ, ಮಲೆನಾಡಿನಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​

ಮುಂದಿನ ಸುದ್ದಿ
Show comments