ಪುರುಷ ಪ್ರಧಾನ ಅಫ್ಘನ್‌ನಲ್ಲಿ ಎಲ್ಲ ಸಾಂಪ್ರಾದಾಯಿಕ ಚೌಕಟ್ಟುಗಳನ್ನು ಸರಿಸಿ ಮೊದಲ ಬಾರಿಗೆ ಮಹಿಳೆಯೊಬ್ಬರು ರಾಜ್ಯಪಾಲೆಯಾಗಿದ್ದಾರೆ.
ಡೈಕುಂಡಿ ಪ್ರಾಂತ್ಯದ ರಾಜ್ಯಪಾಲೆಯಾಗಿ ಮಾಸೂಮ್ ಮುರಾಡಿ ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ಸುತ್ತಲೂ ಪುರುಷ ಸಲಹೆಗಾರರು ಮತ್ತು ಅಧಿಕಾರಿಗಳನ್ನೊಳಗೊಂಡು, ಕಟ್ಟಾ ಮೂಲಭೂತವಾದಿಗಳ ಹಾಗೂ ಎದುರಾಳಿಗಳ ನಡುವೆ ಮಾಸೂಮ್ ಅತ್ಯುನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಬಹಳಷ್ಟು ಜನರು ತಾವು ತೆರೆದ ಮನಸ್ಸಿನವರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಉನ್ನತ ಸ್ಥಾನದಲ್ಲಿ ಮಹಿಳೆಯರನ್ನು ನೋಡಲು ಇಷ್ಟ ಪಡುವುದಿಲ್ಲ ಎನ್ನುತ್ತಾರೆ 37 ವರ್ಷದ ಮುರಾಡಿ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.