Select Your Language

Notifications

webdunia
webdunia
webdunia
webdunia

ಚಿಟ್ಟೆ ಕೊಂದಿದ್ದಕ್ಕೆ ಪ್ರಕರಣ ದಾಖಲು

ಚಿಟ್ಟೆ ಕೊಂದಿದ್ದಕ್ಕೆ ಪ್ರಕರಣ ದಾಖಲು
, ಗುರುವಾರ, 12 ಜನವರಿ 2017 (09:26 IST)
ಅಳಿವಿನಂಚಿನಲ್ಲಿರುವ 'ಲಾರ್ಜ್ ಬ್ಲೂ' ತಳಿಯ ಚಿಟ್ಟೆಗಳನ್ನು ಕೊಂದಿದ್ದಕ್ಕೆ ಬ್ರಿಟನ್‌ನಲ್ಲಿ ಫಿಲಿಪ್ ಕಲ್ಲೆನ್ (57) ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
 

 
ಫಿಲಿಪ್ 2015 ಜೂನ್ ತಿಂಗಳಲ್ಲಿ ಎರಡು ರಕ್ಷಿತ ಚಿಟ್ಟೆಯನ್ನು ಹಿಡಿದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಚಿಟ್ಟೆಗಳು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
 
ಈ ಕುರಿತು ಬುಧವಾರ ಅವರು ಬ್ರಿಸ್ಟಲ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆಯನ್ನೆದುರಿಸಿದರು.
 
ತಾವು ಚಿಟ್ಟೆ ಕೊಂದಿಲ್ಲ ಎಂದು ಫಿಲಿಪ್ ವಾದಿಸುತ್ತಿದ್ದಾರೆ. ಸದ್ಯ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸಿಎಂ ಅಭ್ಯರ್ಥಿ ಅಲ್ಲ: ಕೇಜ್ರಿವಾಲ್