ದಕ್ಷಿಣ ಅಮೆರಿಕಾದ ಈಕ್ವಡಾರ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 41 ಜನ ಬಲಿಯಾಗಿರುವ ಮಾಹಿತಿ ಲಭ್ಯವಾಗಿದೆ. ವಾಯುವ್ಯ ಪೆಸಿಫಿಕ್ ಕರಾವಳಿ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಕಂಪನ ಸಂಭವಿಸಿದೆ.
ಗ್ಯೂಯಾಕ್ವೆಲ್‌ನ ಪ್ರಮುಖ ನಗರದಲ್ಲಿ ಗಂಭೀರ ಹಾನಿಯಾಗಿದ್ದು, ಈಕ್ವೆಡಾರ್ ಸೇರಿದಂತೆ ನೆರೆಹೊರೆಯ ದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಭೂಕಂಪನ ಕಾರಣದಿಂದ ಸಮುದ್ರ ಮಟ್ಟದಲ್ಲಿ ಬೃಹತ್ ಪ್ರಮಾಣದ ಅಲೆಗಳು ಕಾಣಿಸಿಕೊಂಡಿದ್ದು, ಕರಾವಳಿ ಭಾಗದ ಜನರು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸರಕಾರ ಸೂಚನೆ ನೀಡಿದೆ.
ತೀವ್ರವಾದ ಭೂಕಂಪನ ಹಿನ್ನೆಲೆಯಲ್ಲಿ ಅಧ್ಯಕ್ಷ ರಫೆಲ್ ಕೊರ್ರಿಯಾ, ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.