Select Your Language

Notifications

webdunia
webdunia
webdunia
webdunia

ಚೀನಾ ಪರ ನಿಂತ ಲಷ್ಕರ್ ಉಗ್ರರು: ಭಾರತದ ವಿರುದ್ಧ ಯುದ್ದಕ್ಕೆ ಕರೆ

ಚೀನಾ ಪರ ನಿಂತ ಲಷ್ಕರ್ ಉಗ್ರರು: ಭಾರತದ ವಿರುದ್ಧ ಯುದ್ದಕ್ಕೆ ಕರೆ
ನವದೆಹಲಿ , ಮಂಗಳವಾರ, 25 ಜುಲೈ 2017 (12:40 IST)
ಗಡಿಯಲ್ಲಿ ಚೀನಾ ಭಾರತದ ವಿರುದ್ಧ ಮುಗಿಬೀಳುಲು ಸಜ್ಜಾಗಿರುವ ಬೆನ್ನಲ್ಲೇ ಪಾಕಿಸ್ತಾನ ಕೃಪಾಪೋಷಿತ ನಿಷೇಧಿತ ಉಗ್ರ ಸಂಘಟನೆ ಲಷ್ಕರ್ ಇ ತೊಯಿಬಾ ಈಶಾನ್ಯ ಭಾರತದಲ್ಲಿ ಕೂಲಿ ಯುದ್ಧ ಸೃಷ್ಟಿಸಲು ಜಿಹಾದಿಗಳಿಗೆ ಕರೆ ನಿಡಿದೆ.
 

ಭದ್ರತಾ ಪಡೆಗಳು ಕಲೆ ಹಾಕಿರುವ ವಿಡಿಯೋದಲ್ಲಿ ಲಷ್ಕರ್ ಇ ತೊಯಿಬಾದ ಸಹ ಸಂಸ್ಥಾಪಕ ಅಮೀರ್ ಹಂಜಾ ಕಾಣಿಸಿಕೊಂಡಿದ್ದು, ಈಶಾನ್ಯ ಭಾರತದಲ್ಲಿ ಗಳಭೆ ಸೃಷ್ಟಿಗೆ ಕರೆ ನೀಡಿರುವುದು ಬೆಳಕಿಗೆ ಬಂದಿದೆ. ಜುಲೈ 19ರಂದು ಲಾಹೋರ್`ನಲ್ಲಿ ಚಿತ್ರೀಕರಿಸಿರುವ ವಿಡಿಯೋ ಎನ್ನಲಾಗುತ್ತಿದ್ದು, ಸಿಕ್ಕಿ, ಡಾರ್ಜಲಿಂಗ್`ನಲ್ಲಿ ಗಲಭೆ ಸೃಷ್ಟಿಸಲು ವಿಡಿಯೊದಲ್ಲಿ ಸಂಚು ಮಾಡಿರುವುದು ತಿಳಿದು ಬರುತ್ತಿದೆ.

`ನಾವು ಸಿಕ್ಕಿಂನಲ್ಲಿ ಹೋರಾಟ ನಡೆಸುತ್ತೇವೆ. ಭೂತಾನ್`ನಲ್ಲಿ ಹೋರಾಟ ನಡೆಸುತ್ತೇವೆ. ಡಾರ್ಜಲಿಂಗ್`ನಲ್ಲಿ ಹೋರಾಟ ನಡೆಸುತ್ತೇವೆ. ಶ್ರೀನಗರದಲ್ಲೂ ಹೋರಾಟ ನಡೆಸುತ್ತೇವೆ ಎನ್ನುವ ಮೂಲಕ ವಿವಾದಿತ ಪ್ರದೇಶಗಳನ್ನ ಹಂಜಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ದೊಕ್ಲಾಮ್`ನಲ್ಲಿ ಭಾರತ ದೇಶ ಭೂತಾನ್`ಗೆ ಬೆಂಬಲ ನೀಡಿದ ರೀತಿಯೇ ಕಾಶ್ಮೀರದಲ್ಲಿ ಚೀನಾ, ಪಾಕಿಸ್ತಾನ ಜಂಟಿಯಾಗಿ ಭಾರತದ ವಿರುದ್ಧ ಯುದ್ಧ ನಡೆಸಲಿವೆ ಎಂದಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ, ಪ್ರೊಫೆಸರ್‌ ಯಶ್‌ ಪಾಲ್‌ ವಿಧಿವಶ