Select Your Language

Notifications

webdunia
webdunia
webdunia
webdunia

ಪಾಕ್ ಸೇನೆ ಭಯೋತ್ಪಾದಕ ಸಂಘಟನೆಗಳ ಕೈಗೊಂಬೆ: ಹಫೀಜ್ ಮಕ್ಕಿ

ಪಾಕ್ ಸೇನೆ ಭಯೋತ್ಪಾದಕ ಸಂಘಟನೆಗಳ ಕೈಗೊಂಬೆ: ಹಫೀಜ್ ಮಕ್ಕಿ
ನವದೆಹಲಿ , ಸೋಮವಾರ, 29 ಮೇ 2017 (19:29 IST)
ಪಾಕಿಸ್ತಾನದ ಸೇನೆ ಉಗ್ರಗಾಮಿ ಸಂಘಟನೆಗಳ ಕೈಗೊಂಬೆಯಾಗಿದೆ ಎಂದು ಜಮಾತ್ ಉದ್ ದಾವಾ ಸಂಘಟನೆ 
ಮುಖ್ಯಸ್ಥ ಉಗ್ರ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ, ಸೇನೆಯ ಹೇಯ ಕೃತ್ಯವನ್ನು ಬಹಿರಂಗಪಡಿಸಿದ್ದಾನೆ. 
 
ಪಾಕಿಸ್ತಾನದ ಮಾಜಿ ಸೈನ್ಯದ ಮುಖ್ಯಸ್ಥ ರಹೀಲ್ ಶರೀಫ್ ಅವರು ನಮ್ಮ ಜಿಹಾದ್‌ಗೆ ನೀಡಿದ ಬೆಂಬಲದಿಂದ ಇಸ್ಲಾಮಿಕ್ 
ಒಕ್ಕೂಟ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ತಿಳಿಸಿದ್ದಾರೆ.
 
ಮಾಧ್ಯಮಗಳ ಪ್ರಕಾರ, ಮಕ್ಕಿ, ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ವಿರುದ್ಧ ಕೂಡಾ ವಾಗ್ದಾಳಿ 
ನಡೆಸಿದ್ದಾರೆ. ಜಮಾತ್ ಉದ್ ದವಾ ಸಂಘಟನೆಯ ಒತ್ತಡದಿಂದಾಗಿಯೇ ಮುಷ್ರಫ್ ದೇಶ ತ್ಯಜಿಸಿದರು ಎಂದು ಮಾಹಿತಿ ನೀಡಿದ್ದಾನೆ.
 
ಅಮೆರಿಕದ ನ್ಯಾಟೋ ಸೈನ್ಯವನ್ನು ಸೋಲಿಸಿ ಅಫ್ಘಾನಿಸ್ತಾನದಿಂದ ಒದ್ದೊಡಿಸಿದ್ದೇವೆ. ಭಾರತವನ್ನು ನಾಶಗೊಳಿಸುತ್ತೇವೆ. ಒಂದು 
ವೇಳೆ ರಷ್ಯಾ ಪಾಕಿಸ್ತಾನಕ್ಕೆ ನೆರವು ನೀಡಿದರೂ ನಮ್ಮ ಜಿಹಾದ್ ಮುಂದೆ ಅಮೆರಿಕ, ರಷ್ಯಾ ತಿಗಣಿಯಂತೆ.ಯಾವುದೇ ಕ್ಷಣದಲ್ಲಿ ಹೊಸಕಿ ಹಾಕುತ್ತೇವೆ ಎಂದು ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ ಗುಡುಗಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವ ಸ್ಥಾನಕ್ಕೆ ಜಿ.ಪರಮೇಶ್ವರ್ ರಾಜೀನಾಮೆ?