Select Your Language

Notifications

webdunia
webdunia
webdunia
webdunia

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಪತ್ನಿಯ ಮೇಲೆ ವಂಚನೆ ಆರೋಪ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಪತ್ನಿಯ ಮೇಲೆ ವಂಚನೆ ಆರೋಪ
ಇಸ್ರೇಲ್ , ಶುಕ್ರವಾರ, 22 ಜೂನ್ 2018 (14:58 IST)
ಇಸ್ರೇಲ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರ  ಪತ್ನಿ ಸಾರಾ ನೆತನ್ಯಾಹು ಅವರ  ವಿರುದ್ಧ  ಸರಕಾರಿ ಬೊಕ್ಕಸದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಸಾರಾ ನೆತನ್ಯಾಹು ಅವರು  ಪ್ರಧಾನಿಯ ನಿವಾಸದಲ್ಲಿ ನಡೆದ ಊಟ ಉಪಚಾರದ ಖರ್ಚಿಗೆ ಸರಕಾರದಿಂದ 1,00,000 ಡಾಲರ್ ಮೊತ್ತವನ್ನು ಪಾವತಿಸಿದ್ದಾರೆ ಎಂದು ಆರೋಪಿಸಿ ಜೆರುಸಲೇಮ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೆ ಸಾರಾ ನೆತನ್ಯಾಹು ಖಾಸಗಿ ಅಡುಗೆಯವರಿಗೆ ಸುಮಾರು 10,000 ಡಾಲರ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 2012ರ ಎಪ್ರಿಲ್‌ನಲ್ಲಿ ಕುಟುಂಬವು 7,100 ಡಾಲರ್‌ಗೂ ಹೆಚ್ಚಿನ ಮೊತ್ತದ ಉಪಾಹಾರವನ್ನು ತರಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ 'ಉಪಹಾರ ಆದೇಶ ಪ್ರಕರಣ' ಎಂದು ಹೆಸರಾಗಿದ್ದು ಅಪರಾಧ ಸಾಬೀತಾದರೆ ಗರಿಷ್ಟ 8 ವರ್ಷದ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಯನ್ನು ಮಾನಸಿಕ ಅಸ್ವಸ್ಥ ಎಂದು ಕರೆದವರು ಯಾರು ಗೊತ್ತೇ?