ಇರಾನ್ ಮೇಲೆ ಮತ್ತೆ ಇಸ್ರೇಲ್ ಭೀಕರ ದಾಳಿ: ಖಮೇನಿಗೂ ಸದ್ದಾಂ ಹುಸೇನ್ ಗತಿಯಾಗುತ್ತಾ

Krishnaveni K
ಬುಧವಾರ, 18 ಜೂನ್ 2025 (08:56 IST)
ಜೆರುಸಲೇಂ: ಇರಾನ್ ಮೇಲೆ ಇಸ್ರೇಲ್ ಮತ್ತೆ ಭೀಕರ ಮಿಸೈಲ್ ದಾಳಿ ನಡೆಸಿದ್ದು ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಇರಾನ್ ಪರಮೋಚ್ಛ ನಾಯಕ ಅಯತೊಲ್ಲ ಅಲಿ ಖಮೇನಿಗೂ ಸದ್ದಾಂ ಹುಸೇನ್ ಗಾದ ಗತಿಯೇ ಆಗಲಿದೆಯೇ ಎಂಬ ಅನುಮಾನ ಮೂಡಿದೆ.

ಇಸ್ರೇಲ್ ದಾಳಿ ಇರಾನ್ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಇಸ್ರೇಲ್ ಗೆ ಅಮೆರಿಕಾದ ಬೆಂಬಲವೂ ಇರುವುದು ಅದರ ಬಲ ಹೆಚ್ಚಿಸಿದೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ವಾರ್ ಟೈಂ ಕಮಾಂಡರ್ ಹತ್ಯೆಯಾಗಿದ್ದಾನೆ. ಇದರ ಬೆನ್ನಲ್ಲೇ ಅಯತೊಲ್ಲ ಅಲಿ ಖಮೇನಿ ಅಡಗಿ ಕೂತಿದ್ದು ಎಲ್ಲಾ ಅಧಿಕಾರವನ್ನು ಸೇನೆಗೆ ವಹಿಸಿದ್ದಾರೆ ಎನ್ನಲಾಗುತ್ತಿದೆ.

ಒಂದೆಡೆ ಅಮೆರಿಕಾ ಖಮೇನಿ ಶರಣಾಗತಿಗೆ ಸೂಚಿಸುತ್ತಿದ್ದರೆ ಇಸ್ರೇಲ್ ಖಮೇನಿ ಹತ್ಯೆಯಾಗದೇ ಯುದ್ಧ ನಿಲ್ಲದು ಎನ್ನುತ್ತಿದೆ. ಇದರಿಂದಾಗಿ ಇರಾಕ್ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್ ಗಾದ ಗತಿಯೇ ಖಮೇನಿಗೆ ಆಗಲಿದೆಯೇ ಎಂಬ ಅನುಮಾನ ಮೂಡುತ್ತಿದೆ.

2003 ರಲ್ಲಿ ಅಮೆರಿಕಾ ದಾಳಿ ನಡೆಸಿ ಸದ್ದಾಂ ಹುಸೇನ್ ನ್ನು ಬಂಧಿಸಿ ಬಳಿಕ ಗಲ್ಲಿಗೇರಿಸಿತ್ತು. ಇದೀಗ ಇರಾನ್ ಸರ್ವಾಧಿಕಾರಿಗೂ ಇದೇ ಗತಿಯಾಗಲಿದೆ ಎನ್ನುತ್ತಿದೆ ವರದಿಗಳು. ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವ ಇರಾನ್ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಈಗಾಗಲೇ ಖಮೇನಿಗೆ ಎಚ್ಚರಿಕೆ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಶಬರಿಮಲೆಗೆ ಹೋಗುತ್ತಿದ್ದ ಭಕ್ತರ ಜೊತೆ ಬಸ್ ಕಂಡಕ್ಟರ್ ವರ್ತನೆಗೆ ನೆಟ್ಟಿಗರು ಫಿದಾ video

ಸೈಡಿಗೆ ಹೋಗೋ.. ನೀರಾಟಕ್ಕೆ ಅಡ್ಡಿಪಡಿಸಿದ್ದಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಆನೆ ಮಾಡಿದ್ದೇನು

ಕೇರಳದಲ್ಲಿ ಪಂಚಾಯತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿರುವ ಸೋನಿಯಾ ಗಾಂಧಿ: ಅಚ್ಚರಿ ಬೆಳವಣಿಗೆ

ಮುಂದಿನ ಸುದ್ದಿ
Show comments