Webdunia - Bharat's app for daily news and videos

Install App

ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ

Krishnaveni K
ಶನಿವಾರ, 14 ಜೂನ್ 2025 (10:28 IST)
ಇಸ್ಲಾಮಾಬಾದ್: ಒಂದೆಡೆ ಇರಾನ್ ಮೇಲೆ ಇಸ್ರೇಲ್ ನುಗ್ಗಿ ಹೊಡೆಯುತ್ತಿದ್ದರೆ ಇತ್ತ ಟೆನ್ಷನ್ ಮಾತ್ರ ಪಾಕಿಸ್ತಾನಕ್ಕೆ. ಇದು ಯಾಕೆ ಇಲ್ಲಿದೆ ನೋಡಿ ವಿವರ. ಇಸ್ರೇಲ್ ನಡೆಸಿದ ದಾಳಿಗೆ ಇರಾನ್ ಪ್ರತಿ ದಾಳಿ ನಡೆಸಿದೆ.

ನಿನ್ನೆ ಬೆಳಿಗ್ಗೆ ಇರಾನ್ ನ  ಪರಮಾಣು ಕೇಂದ್ರಗಳನ್ನು ಗುರಿಯಾಗಿರಿಸಿ ಇಸ್ರೇಲ್ ದಾಳಿ ನಡೆಸಿತ್ತು. ಇಸ್ರೇಲ್ ದಾಳಿಗೆ ತಕ್ಕ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ. ಇಸ್ರೇಲ್ ದಾಳಿಯನ್ನು ನೋಡುತ್ತಾ ಕೂರಲ್ಲ ಎಂದಿದ್ದಾರೆ.

ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಟೆನ್ಷನ್ ಶುರುವಾಗಿದೆ. ಎರಡೂ ದೇಶಗಳು ತಕ್ಷಣವೇ ಜಾಗತಿಕ ಶಾಂತಿ ಕದಡುವ ಈ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ.

ಇರಾನ್ ಜೊತೆಗೆ ಪಾಕಿಸ್ತಾನ ನಿಕಟ ಸಂಬಂಧ ಹೊಂದಿದೆ. ಅಲ್ಲಿ ಸಾಕಷ್ಟು ಜನ ಪಾಕಿಸ್ತಾನಿಯರಿದ್ದಾರೆ. ಒಂದು  ವೇಳೆ ಇರಾನ್-ಇಸ್ರೇಲ್ ನಡುವೆ ಯುದ್ಧ ತೀವ್ರವಾದರೆ ಅಲ್ಲಿರುವ ಪಾಕಿಸ್ತಾನಿಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.  ಅಲ್ಲದೆ ಇರಾನ್ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೂ ಪಾಕಿಸ್ತಾನ ಸಹಿ ಹಾಕಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಈ ವ್ಯಾಪಾರ ಒಪ್ಪಂದ ರದ್ದಾದರೆ ಸಂಕಷ್ಟಕ್ಕೆ ಸಿಲುಕಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಳ್ತಂಗಡಿ ಪೊಲೀಸ್ ವಿಚಾರಣೆಗೆ ಹಾಜರಾಗಬೇಕಿದ್ದ ತಿಮರೋಡಿ ಗೈರು, ಯಾವ ಪ್ರಕರಣದಲ್ಲಿ ಗೊತ್ತಾ

ತಮ್ಮ ಸ್ಥಾನ ಉಳಿಸಲು, ಸೋನಿಯಾ ಗಾಂಧಿ ಮೆಚ್ಚಿಸಲು ಸಿದ್ದರಾಮಯ್ಯ ಹೀಗೇ ನಡೆದುಕೊಳ್ಳುತ್ತಿದ್ದಾರೆ

ನಾಳೆಯಿಂದ ಜಾತಿಗಣತಿ ಶುರು, 33ಕ್ರಿಶ್ಚಿಯನ್ ಜಾತಿಗಳನ್ನು ಕೈಬಿಟ್ಟ ಆಯೋಗ

ಮಾನಸಿಕ ಅಸ್ವಸ್ಥೆಯಾದ್ರೆ ಮುಖ ಮುಚ್ಚಿ, ಗಣೇಶನನ್ನೇ ಅಪವಿತ್ರಗೊಳಿಸುವಷ್ಟು ಬುದ್ಧಿ ಇರುತ್ತಾ

ದಿಢೀರ್ ದೇಶದ ಜನರ ಜತೆ ಮಾತನಾಡಲು ಸಮಯ ನಿಗದಿ ಮಾಡಿದ ಮೋದಿ, ಹೆಚ್ಚಿದ ಕುತೂಹಲ

ಮುಂದಿನ ಸುದ್ದಿ
Show comments