ಐಎಸ್‌ನಿಂದ ಭಾರತೀಯ ಜಿಹಾದಿಗಳ ವಿಡಿಯೊ ಬಿಡುಗಡೆ
ಸಿರಿಯಾ , ಶುಕ್ರವಾರ, 20 ಮೇ 2016 (20:19 IST)
ಮಾರಕ ಭಯೋತ್ಪಾದಕ ಸಂಘಟನೆ ಐಎಸ್ ಹೊಸ ಪ್ರಚಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೊದಲ್ಲಿ ಕಲಾಶ್ನಿಕೋವ್ ಬಂದೂಕನ್ನು ಝಳುಪಿಸುವ, ಹೋಮ್ಸ್ ಪ್ರಾಂತ್ಯದಲ್ಲಿ ಸಿರಿಯ ಪಡೆಗಳ ವಿರುದ್ಧ ಹೋರಾಟ ಮಾಡುವ ಭಾರತೀಯ ಜಿಹಾದಿಗಳ ದೊಡ್ಡ ಗುಂಪನ್ನು ತೋರಿಸಲಾಗಿದೆ.
ಭಾರತದಿಂದ ಇನ್ನಷ್ಟು ಜಿಹಾದಿಗಳನ್ನು ನೇಮಕ ಮಾಡಿಕೊಳ್ಳುವ ಗುರಿಯೊಂದಿಗೆ ಭಾರತೀಯ ಜಿಹಾದಿಗಳ ವಿಡಿಯೊವನ್ನು ಸಂಘಟನೆ ಬಿಡುಗಡೆ ಮಾಡಿದೆ ಎಂದು ಅದು ತಿಳಿಸಿದೆ.
ದೇಶವನ್ನು ತ್ಯಜಿಸಿ ಸಿರಿಯಾದಲ್ಲಿ ಕಾಫರರ ವಿರುದ್ಧ ಹೋರಾಟ ಮಾಡಲು ಜಿಹಾದ್ ಯುದ್ದಕ್ಕೆ ಸೇರುವಂತೆ ಐಎಸ್ ಉಗ್ರರು ಭಾರತೀಯರಿಗೆ ಕರೆ ನೀಡಿದ್ದಾರೆಂದು ವಿಡಿಯೊ ಉದಾಹರಿಸಿ ಅಲ್ ಮಸ್ದಾರ್ ನ್ಯೂಸ್ ತಿಳಿಸಿದೆ. ಆದರೆ ಸಿರಿಯಾದಲ್ಲಿ ಎಷ್ಟು ಮಂದಿ ಭಾರತೀಯರು ಐಎಸ್ ಜತೆ ಹೋರಾಡುತ್ತಿದ್ದಾರೆಂಬ ನಿಖರ ಸಂಖ್ಯೆ ತಿಳಿದುಬಂದಿಲ್ಲ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಮುಂದಿನ ಸುದ್ದಿ