ನೈಸ್ ನಗರದ ಮೇಲೆ ನಡೆದ ಬೀಕರ ಉಗ್ರರ ದಾಳಿಯ ಹೊಣೆಯನ್ನು ಜಾಗತಿಕ ಉಗ್ರಗಾಮಿ ಸಂಘಟನೆಯಾದ ಐಸಿಎಸ್ ಹೊತ್ತುಕೊಂಡಿದೆ
ಇಸ್ಲಾಮಿಕ್ ಸ್ಟೇಟ್ಸ್ ಬೆಂಬಲಿತ ಮಾಧ್ಯಮಗಳ ಪ್ರಕಾರ, ಫ್ರಾನ್ಸ್‌ನ ನೈಸ್ ನಗರದ ಮೇಲೆ ದಾಳಿ ಮಾಡಿದ ಉಗ್ರ ಐಸಿಎಸ್ ಸಂಘಟನೆಯ ಕಟ್ಟಾ ಸೈನಿಕನಾಗಿದ್ದಾನೆ ಎಂದು ತಿಳಿಸಲಾಗಿದೆ.
ಫ್ರಾನ್ಸ್‌ನ ನೈಸ್ ನಗರದಲ್ಲಿ ಬಾಸ್ಟಿಲ್ಲೆ ದಿನಾಚರಣೆ ಆಚರಿಸಲು ಸೇರಿದ್ದ ಜನ ಜಂಗುಳಿಯ ಮೇಲೆ ಟ್ಯುನೇಶಿಯನ್ ಸಂಜಾತ ಉಗ್ರ ಭಾರಿ ಗಾತ್ರದ ಟ್ರಕ್‌ನ್ನು ಮನಬಂದಂತೆ ಚಲಾಯಿಸಿದ್ದಲ್ಲದೇ ಗುಂಡಿನ ಮಳೆಗೆರೆದಿದ್ದ ನಂತರ ಭಧ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ. ಆದರೆ, ಘಟನೆಯಲ್ಲಿ 84 ಮಂದಿ ಸಾವನ್ನಪ್ಪಿದ್ದು 150 ಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದರು.
ಕಳೆದ 2015ರಲ್ಲಿ ತಾರ್ಲಿ ಹೆಬ್ಡೊ ಮ್ಯಾಗ್‌ಜಿನ್ ಪತ್ರಿಕಾ ಕಚೇರಿ ಮೇಲೆ ನಡೆದ ಉಗ್ರರ ದಾಳಿ, ನವೆಂಬರ್ ತಿಂಗಳು ಪ್ಯಾರಿಸ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 147 ಜನ ಸಾವನ್ನಪ್ಪಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.