Select Your Language

Notifications

webdunia
webdunia
webdunia
webdunia

ಇಸ್ಲಾಂ ಧರ್ಮ : ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ

ಇಸ್ಲಾಂ ಧರ್ಮ : ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ
ನವದೆಹಲಿ , ಶುಕ್ರವಾರ, 21 ಏಪ್ರಿಲ್ 2023 (10:45 IST)
ಬ್ರಿಟೀಷ್ ಶಾಲೆಗಳಲ್ಲಿ ಹಿಂದೂ ಧರ್ಮದ ಕುರಿತು ಅತ್ಯಂತ ಕಳಪೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ. ಅಲ್ಲದೇ ಹಿಂದೂ ಧರ್ಮದ ಬಗ್ಗೆ ಬ್ರಿಟನ್ ಶಾಲೆಯಲ್ಲಿ ನೀಡುವ ಶಿಕ್ಷಣವು ಧರ್ಮವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿರುತ್ತದೆ ಎಂದು ಪೋಷಕರೊಬ್ಬರು ಹೇಳಿದ್ದಾರೆ. 

ಬ್ರಿಟಿಷರು 400 ವರ್ಷಗಳ ಕಾಲಾ ಭಾರತವನ್ನು ಆಳ್ವಿಕೆ ಮಾಡಿದರೂ ಸಹ ಅವರಲ್ಲಿ ಹಿಂದೂ ಧರ್ಮದ ಜ್ಞಾನದ ಕೊರತೆಯಿದೆ. ಅವರು ನಮಗೆ ದೇವರ ಮೇಲಿರುವ ನಂಬಿಕೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಹಿಂದೂ ಮಕ್ಕಳು ಬ್ರಿಟನ್ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಹಿಂದೂ ಧರ್ಮದ ಆಚರಣೆಗಳನ್ನು, ನಂಬಿಕೆಗಳನ್ನು ಬ್ರಿಟನ್ ಶಾಲೆಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ಹಿಂದೂಗಳು ಗೋಮಾತೆಯನ್ನು ಪವಿತ್ರವೆಂದು ಪೂಜಿಸುತ್ತಾರೆ. ಆದರೆ ಅಲ್ಲಿ ಹಿಂದೂ ಎಂಬ ಕಾರಣಕ್ಕೆ ಒಬ್ಬ ಹೆಣ್ಣುಮಗಳ ಮೇಲೆ ಗೋ ಮಾಂಸವನ್ನು ಎಸೆದಿದ್ದಲ್ಲದೆ, ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ಈ ದೌರ್ಜನ್ಯ ನಿಲ್ಲುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ. ಈ ರೀತಿಯಾದ ದೌರ್ಜನ್ಯ ಮತ್ತು ಬೆದರಿಕೆಗಳಿಂದಾಗಿ ಹಿಂದೂ ಮಕ್ಕಳು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾರೆ.

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಅನೇಕ ಹಿಂದೂ ಮಕ್ಕಳು ಬ್ರಿಟನ್ ಶಾಲೆಗಳಲ್ಲಿ ಹಿಂಸೆಯನ್ನು ಅನುಭವಿಸಿದ್ದಾರೆ. ಅಲ್ಲದೆ ನಿಮಗೆ ಸ್ವರ್ಗ ಲಭಿಸಬೇಕಾದರೇ ನೀವು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂದು ಮಕ್ಕಳನ್ನು ಪೀಡಿಸಿದ್ದಾರೆ. ಹಿಂದೂಗಳು ಆನೆಗಳು, ಕೋತಿಗಳು ಮತ್ತು ಮೂರ್ತಿಗಳಂತಹ 33 ಕೋಟಿ ದೇವರುಗಳನ್ನು ಪೂಜಿಸುತ್ತಾರೆ ಎಂದು ಅಪಹಾಸ್ಯ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೇಸ್‌ಎಕ್ಸ್‌ನ ದೈತ್ಯ ರಾಕೆಟ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟ