Publish Date: Sat, 07 Mar 2026 (14:12 IST)
Updated Date: Sat, 07 Mar 2026 (14:14 IST)
ಟೆಹ್ರಾನ್: ಅಮೆರಿಕಾ ಮತ್ತು ಇಸ್ರೇಲ್ ಮೇಲಿನ ಕೋಪಕ್ಕೆ ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಿದ್ದ ಇರಾನ್ ಈಗ ಉಲ್ಟಾ ಹೊಡೆದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ನೆರೆಯ ರಾಷ್ಟ್ರಗಳ ಮುಂದೆ ಮಂಡಿಯೂರಿದ್ದಾರೆ.
ಇರಾನ್-ಇಸ್ರೇಲ್ ಅಮೆರಿಕ ಸಂಘರ್ಷ ಮುಂದುವರೆದಿರುವಂತೆಯೇ ಅಚ್ಚರಿ ಬೆಳವಣಿಗೆ ನಡೆದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ನೆರೆಯ ರಾಷ್ಟ್ರಗಳಿಗೆ ಕ್ಷಮೆಯಾಚಿಸಿದ್ದಾರೆ.
ತಮ್ಮ ಮೇಲಿನ ದಾಳಿ ಮತ್ತು ತಮ್ಮ ಸರ್ವೋಚ್ಛ ನಾಯಕ ಆಯತೊಲ್ಲ ಅಲಿ ಖಮೇನಿ ವಿಚಾರವಾಗಿ ಕೆಂಡಾಮಂಡಲವಾಗಿರುವ ಇರಾನ್, ಇದೀಗಅಚ್ಚರಿ ಬೆಳವಣಿಗೆಯಲ್ಲಿ ತನ್ನ ನೆರೆಹೊರೆ ರಾಷ್ಟ್ರಗಳ ಕ್ಷಮೆಕೋರಿದೆ.
ನೆರೆಹೊರೆಯ ರಾಷ್ಟ್ರಗಳಿಗೆ ಸಂದೇಶ ಕಳುಹಿಸಿ, ಕ್ಷಮಿಸಿ ಎಂದು ಮಸೌದ್ ಪೆಜೆಶ್ಕಿಯಾನ್ ಹೇಳಿದ್ದು,ಆ ಮೂಲಕ ಅಮೆರಿಕ-ಇಸ್ರೇಲ್ ಜೊತೆಗಿನ ಯುದ್ಧದ ಮಧ್ಯೆ ಉದ್ವಿಗ್ನತೆಯನ್ನು ಶಮನಗೊಳಿಸಲು ಮೊದಲ ಪ್ರಮುಖ ಹೆಜ್ಜೆ ಇಟ್ಟಿದೆ.
ತೀವ್ರಗೊಂಡಿರುವ ಶಮನಗೊಳಿಸುವ ಮೊದಲ ಪ್ರಮುಖ ಹೆಜ್ಜೆಯನ್ನು ಇರಾನ್ ಇಟ್ಟಿದ್ದು, ಇರಾನ್ ಮೇಲಿನ ದಾಳಿಯು ಅವರ ಪ್ರದೇಶದಿಂದ ಹುಟ್ಟಿಕೊಳ್ಳದ ಹೊರತು ಟೆಹ್ರಾನ್ ನೆರೆಯ ರಾಷ್ಟ್ರಗಳ ವಿರುದ್ಧ ಕ್ಷಿಪಣಿ ದಾಳಿ ಅಥವಾ ದಾಳಿಗಳನ್ನು ನಡೆಸುವುದಿಲ್ಲ ಎಂದು ದೇಶದ ಮಧ್ಯಂತರ ನಾಯಕತ್ವ ಮಂಡಳಿಯ ಪ್ರಮುಖರೂ ಆಗಿರುವ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಈ ನಿರ್ಧಾರವನ್ನು ಘೋಷಿಸಿದ್ದಾರೆ.
ಆದರೆ, ತಮ್ಮ ಸರ್ವೋಚ್ಛ ನಾಯಕ ಖಮೆನಿ ಹತ್ಯೆ ಮಾಡಿದ ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ತಮ್ಮ ದೇಶವು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಶರಣಾಗುವುದಿಲ್ಲ ಎಂದೂ ಮಸೌದ್ ಪೆಜೆಶ್ಕಿಯಾನ್ ಪುನರುಚ್ಚರಿಸಿದ್ದಾರೆ.