Webdunia - Bharat's app for daily news and videos

Install App

ಅಮೆರಿಕಾದಿಂದ ಗಡೀಪಾರಾಗಿ ಬಂದ ಭಾರತೀಯರದ್ದು ಕಣ್ಣೀರ ಕತೆ

Krishnaveni K
ಗುರುವಾರ, 6 ಫೆಬ್ರವರಿ 2025 (10:26 IST)
Photo Credit: X
ನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಅಮೆರಿಕಾದಿಂದ ಭಾರತೀಯ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗಿದೆ. ಅಮೆರಿಕಾದಿಂದ ಗಡೀಪಾರಾದ 104  ಭಾರತೀಯರು ಈಗ ತವರಿಗೆ ವಾಪಸಾಗಿದ್ದಾರೆ. ಅವರೆಲ್ಲರ ಕಣ್ಣೀರ ಕತೆ ಈಗ ಒಂದೊಂದೇ ಹೊರಬೀಳುತ್ತಿದೆ.

ಅಮೆರಿಕಾದಿಂದ ಮಿಲಿಟರಿ ವಿಮಾನದಲ್ಲಿ 104 ಭಾರತೀಯರು ಗಡೀಪಾರಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಇವರಲ್ಲಿ ಹೆಚ್ಚಿನವರು ಗುಜರಾತ್, ಹರ್ಯಾಣ ಮತ್ತು ಪಂಜಾಬ್ ಮೂಲದವರೇ. ಗಡೀಪಾರಾಗಿ ಬಂದವರಲ್ಲಿ 25 ಮಹಿಳೆಯರು 13 ಮಕ್ಕಳೂ ಸೇರಿದ್ದಾರೆ.

ಬಹುತೇಕರು ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಮಧ್ಯವರ್ತಿಗಳ ಸಹಾಯದಿಂದ ಅಮೆರಿಕಾಗೆ ಪ್ರಯಾಣಿಸಿದ್ದರು. ಹೆಚ್ಚಿನವರು ತಮ್ಮ ವೀಸಾ, ಉದ್ಯೋಗ ಇತ್ಯಾದಿ ವ್ಯವಸ್ಥೆ ಮಾಡಿಕೊಳ್ಳಲು ಏಜೆಂಟರುಗಳಿಗೆ ಸಾಕಷ್ಟು ಹಣ ನೀಡಿದ್ದರು.

ಅದರಲ್ಲೂ ಗುಜರಾತ್ ನ ಕುಟುಂಬವೊಂದು 1 ಕೋಟಿ ರೂ. ಏಜೆಂಟ್ ಗಳಿಗೆ ನೀಡಿದ್ದರಂತೆ. ಈಗ ದುಡ್ಡೂ ಹೋಯ್ತು, ಅಂದುಕೊಂಡಂತೆ ನಡೆಯಲೂ ಇಲ್ಲ. ಭವಿಷ್ಯಕ್ಕೇನು ಮಾಡುವುದು ಎಂಬ ಚಿಂತೆ ಆ ಕುಟುಂಬದವರದ್ದು. ಮತ್ತೊಬ್ಬರು ಅಮೆರಿಕಾಗೆ ತೆರಳು 42 ಲಕ್ಷ ಖರ್ಚು ಮಾಡಿದ್ದರಂತೆ. ಈಗ ಆ ಹಣವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಅತ್ತ ಮಕ್ಕಳ ಭವಿಷ್ಯವೂ ಹಾಳಾಗಿದೆ. ಇತ್ತ ಪೋಷಕರಿಗೂ ಉದ್ಯೋಗವಿಲ್ಲದಂತಾಗಿದೆ. ಮತ್ತೆ ಶುರುವಿನಿಂದ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಇವರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments