Select Your Language

Notifications

webdunia
webdunia
webdunia
webdunia

56 ವರ್ಷಗಳ ಬಳಿಕ ಭಾರತದ ಪ್ರಧಾನಿ ಗಯಾನ ಭೇಟಿ: ಮೋದಿಗೆ ಅತ್ಯುನ್ನತ ನಾಗರಿಕ ಗೌರವಕ್ಕೆ ನಿರ್ಧಾರ

Prime Minister Narendra Modi

Sampriya

ಗಯಾನಾ , ಬುಧವಾರ, 20 ನವೆಂಬರ್ 2024 (14:09 IST)
Photo Courtesy X
ಗಯಾನಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗಯಾನಾದ ಜಾರ್ಜ್‌ಟೌನ್‌ಗೆ ಭೇಟಿ ನೀಡಿದ್ದಾರೆ. ಈ ಮೂಲಕ 56 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ.

 ಮೋದಿ ಅವರು ಇಂದು ಬ್ರೆಜಿಲ್‌ನಲ್ಲಿ ನಡೆದ 2 ದಿನಗಳ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಅಲ್ಲಿಂದ ಗಯಾನಾದ ಜಾರ್ಜ್‌ಟೌನ್‌ಗೆ ಬಂದಿಳಿದಿದ್ದಾರೆ. ಇದೇ ಸಂದರ್ಭದಲ್ಲಿ ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಸೇರಿದಂತೆ ಇತರೆ ನಾಯಕರು ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಭಾರತ- ಕೆರಿಕಮ್ (ಕೆರಿಬಿಯನ್‌ ಕಮ್ಯುನಿಟಿ) ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಮೋದಿ ಅವರು ಮೊಹಮದ್ ಇರ್ಫಾನ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಗಯಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಡೊಮಿನಿಕಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ ಡೊಮಿನಿಕಾ ಅವಾರ್ಡ್‌ ಆಫ್ ಆನರ್ ನೀಡಲು ನಿರ್ಧರಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಕೋವಿಡ್‌ 19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಅವರು ಡೊಮಿನಿಕಾಕ್ಕೆ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರಧಾನಿ ಮೋದಿ ಅವರು 2021ರ ಫೆಬ್ರುವರಿಯಲ್ಲಿ ಡೊಮಿನಿಕಾಕ್ಕೆ 70,000 ಡೋಸ್ ಅಸ್ಟ್ರಾಜೆನೆಕಾ ಕೋವಿಡ್‌ 19 ಲಸಿಕೆ ಪೂರೈಸಿದ್ದರು. ಈ ಉದಾರ ಕೊಡುಗೆಯು, ಡೊಮಿನಿಕಾಕ್ಕೆ ಕೆರಿಬಿಯನ್‌ನಲ್ಲಿರುವ ತನ್ನ ನೆರೆಯ ದೇಶಗಳಿಗೆ ನೆರವು ನೀಡಲು ಅನುವು ಮಾಡಿಕೊಟ್ಟಿತ್ತು ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದರ ಹೆಚ್ಚಳ: ಗ್ಯಾರಂಟಿಗಾಗಿಯಾ ಎಂದಿದ್ದಕ್ಕೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ