Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಮತ್ತೊರ್ವ ಭಾರತೀಯನ ಹತ್ಯೆ

ಅಮೆರಿಕದಲ್ಲಿ ಮತ್ತೊರ್ವ ಭಾರತೀಯನ ಹತ್ಯೆ
ನ್ಯೂಯಾರ್ಕ್ , ಶನಿವಾರ, 4 ಮಾರ್ಚ್ 2017 (14:57 IST)
ಭಾರತೀಯ ಮೂಲದ ಶ್ರೀನಿವಾಸ್ ಹತ್ಯೆಯ ನೆನಪು ಮಾಸುವ ಮುನ್ನವೇ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನನ್ನು ಹತ್ಯೆ ಮಾಡಲಾಗಿದೆ. ಭಾರತೀಯ ಮೂಲದ ಉದ್ಯಮಿ ಹರ್ನಿಶ್ ಪಟೇಲ್ ಎಂಬುವವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
 
ಭಾರತೀಯ ಮೂಲದ ಉದ್ಯಮಿ ಹರ್ನಿಶ್ ಪಟೇಲ್, ರಾತ್ರಿ ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಕೆಲ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ.
 
ಹರ್ನಿಶ್ ಪಟೇಲ್ ಹತ್ಯೆಯಲ್ಲಿ ಭಾಗಿಯಾದ ಹಂತಕರಿಗಾಗಿ ಅಮೆರಿಕ ಪೊಲೀಸರು ಬೇಟೆ ಆರಂಭಿಸಿದ್ದಾರೆ. ದುಷ್ಕರ್ಮಿಗಳ ಬಗ್ಗೆ ಕೆಲ ಸುಳಿವುಗಳು ಲಭ್ಯವಾಗಿದ್ದು, ಶೀಘ್ರದಲ್ಲಿಯೇ ಹಂತಕರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಕಳೆದ ಬುಧವಾರದಂದು ಅಮೆರಿಕದ ಕ್ಯಾನ್ಸಾಸ್‌ನ ಬಾರ್‌ ಒಂದರಲ್ಲಿ ಭಾರತೀಯ ಮೂಲದ ಶ್ರೀನಿವಾಸ್ ಕುಚ್ಚಿ ಬೋಟ್ಲಾ ಎನ್ನುವವರನ್ನು ನಿವೃತ್ತ ಯೋಧನೊಬ್ಬ ಗುಂಡು ಹಾರಿಸಿ ಹತ್ಯೆಗೈದು ಅಮೆರಿಕದಿಂದ ತೆರಳುವಂತೆ ಗರ್ಜಿಸಿದ್ದ.
 
ಶ್ರೀನಿವಾಸ್ ಹತ್ಯೆ ಭಾರತ-ಅಮೆರಿಕ ದೇಶದಲ್ಲಿ ಬಾರಿ ಕೋಲಾಹಲ ಸೃಷ್ಟಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ರೀನಿವಾಸ್ ಹತ್ಯೆಯನ್ನು ಖಂಡಿಸಿ ಶೃದ್ಧಾಂಜಲಿ ಅರ್ಪಿಸಿದ್ದರು. ಇದೀಗ ಮತ್ತೊಬ್ಬ ಭಾರತೀಯನ ಹತ್ಯೆಯಾಗಿರುವುದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಲ್ಲಿ ಆತಂಕ ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷಕ್ಕೆ ಸೋಲಾದಲ್ಲಿ ಕಾಂಗ್ರೆಸ್ಸಿಗರೇ ಕಾರಣ: ಸುರೇಶ್ ಗೌಡ