ಪಠಾನ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಯ ಕುರಿತಂತೆ ಜಂಟಿ ತನಿಖಾ ಸಮಿತಿ ರಚನೆಗೆ ಒಪ್ಪಿದ್ದರೂ ಭಾರತ ಮಾತುಕತೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನದ ರಾಷ್ಟ್ರಪತಿ ಮಮೂನ್ ಹುಸೈನ್ ಆರೋಪಿಸಿದ್ದಾರೆ.
ಕಾಶ್ಮಿರ ವಿಷಯ ಕೂಡಾ ಇತ್ಯರ್ಥವಾಗದೆ ನೆನೆಗುದಿಗೆ ಬಿದ್ದಿದ್ದರಿಂದ ಪ್ರಾದೇಶಿಕ ವಲಯದಲ್ಲಿ ಉದ್ರಿಕ್ತ ವಾತಾವರಣ ಉಂಟು ಮಾಡಿದೆ. ಕಾಶ್ಮಿರ ಜನತೆ ಮತ್ತು ವಿಶ್ವಸಂಸ್ಥೆಯ ನಿರ್ಣಯದಂತೆ ಕಾಶ್ಮಿರ ಸಮಸ್ಯೆ ಇತ್ಯರ್ಥವಾಗುವವರೆಗೆ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಶಾಂತಿ ಪ್ರದಾನ ದೇಶವಾಗಿದ್ದರಿಂದ ನೆರೆಹೊರೆಯ ರಾಷ್ಟ್ರಗಳು ಸೇರಿದಂತೆ ಎಲ್ಲಾ ರಾಷ್ಟ್ರಗಳೊಂದಿಗೆ ಗೆಳೆತನ ಮತ್ತು ಸಹೋದರತ್ವವನ್ನು ಬಯಸುತ್ತದೆ ಎಂದು ಘೋಷಿಸಿದರು.
ಯಾವುದೇ ದೇಶದ ವಿರುದ್ಧ ನಾವು ಆಕ್ರಮಣಕಾರಿ ಭಾವನೆಗಳನ್ನು ಹೊಂದಿಲ್ಲ. ರಾಷ್ಟ್ರಮಟ್ಟದಲ್ಲಿ ಮತ್ತು ಜಾಗತಿಕ ವ್ಯವಹಾರಗಳಲ್ಲಿ ಸಹೋದರ ಮನೋಭಾವದಿಂದ ಪಾಲ್ಗೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ಪಾಕಿಸ್ತಾನದ ರಾಷ್ಟ್ರಪತಿ ಮಮೂನ್ ಹುಸೈನ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.