ಇಸ್ಲಾಮಾಬಾದ್: ಮಹಿಳೆಯರ ಉಡುಪಿನ ಬಗ್ಗೆ ಸಂದರ್ಶನವೊಂದರಲ್ಲಿ ಕಾಮೆಂಟ್ ಮಾಡಲು ಹೋಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟೀಕೆಗೊಳಗಾಗಿದ್ದಾರೆ.
ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗಲು ಅವರ ಉದ್ರೇಕಕಾರಿ ಉಡುಪುಗಳೇ ಕಾರಣ ಎಂದು ಇಮ್ರಾನ್ ಹೇಳಿದ್ದಾರೆ. ಅವರ ಈ ಹೇಳಿಕೆ ಈಗ ಭಾರೀ ಟೀಕೆಗೊಳಗಾಗಿದೆ.
ಮಹಿಳೆಯರು ಮೈ ಕಾಣುವ ಬಟ್ಟೆ ಧರಿಸಿದರೆ ಪುರುಷರು ಪ್ರಲೋಭನೆಗೊಳಗಾಗುತ್ತಾರೆ. ಇದು ಕಾಮನ್ ಸೆನ್ಸ್. ಪುರುಷರು ರೋಬೋಟ್ ಗಳಾದರೆ ಬಹುಶಃ ಆ ರೀತಿ ಆಗಲ್ಲ. ಇಲ್ಲದೇ ಹೋದರೆ ಇದೆಲ್ಲಾ ಕಾಮನ್ ಎಂದಿದ್ದಾರೆ. ಪ್ರಧಾನಿಯ ಮನಸ್ಥಿತಿ ಮತ್ತು ಮಹಿಳೆಯರ ಮೇಲಿನ ಅಶ್ಲೀಲ ಹೇಳಿಕೆಗೆ ವಿಪಕ್ಷ, ಜನ ಸಾಮಾನ್ಯರಿಂದ ಭಾರೀ ಟೀಕೆ ಎದುರಾಗಿದೆ.