ಕಂಪಾಲಾ : ಉಗಾಂಡ ಸಂಸತ್ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ವಿವಾದಾತ್ಮಕ ಮಸೂದೆಯೊಂದನ್ನು ಅಂಗೀಕರಿಸಿದೆ. ಸಲಿಂಗ ಸಂಬಂಧಗಳಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಮರಣದಂಡನೆಯಂತಹ ಕಠಿಣ ಕ್ರಮದ ಅಂಶಗಳನ್ನು ಮಸೂದೆ ಒಳಗೊಂಡಿದೆ.
ಈಗಾಗಲೇ ಆಫ್ರಿಕನ್ ದೇಶಗಳು ಸಲಿಂಗ ಸಂಬಂಧಗಳನ್ನು ನಿಷೇಧಿಸಿ ಕಾನೂನು ರೂಪಿಸಿವೆ. ಆದರೆ ನೂತನ ಮಸೂದೆಯು ಹಿಂದಿನ ನಿಯಮಗಳನ್ನು ಮತ್ತಷ್ಟು ಭದ್ರಪಡಿಸುತ್ತವೆ.
ಮಸೂದೆಯ ಅನ್ವಯ ಅಧಿಕಾರಿಗಳಿಗೆ, ಸಲಿಂಗ ಸಂಬಂಧದಲ್ಲಿರುವವರನ್ನು ಗುರುತಿಸಿ ವರದಿ ಮಾಡಲು ಅವಕಾಶ ನೀಡಲಾಗಿದೆ. ಎಲ್ಜಿಬಿಟಿ ಸಮುದಾಯಗಳ ಹಕ್ಕುಗಳಿಗೆ ಹೋರಾಡುವ ಹಾಗೂ ಅಂತಹ ಸಂಸ್ಥೆಗಳಿಗೆ ಬೆಂಬಲ ನೀಡಿ ಹಣಕಾಸಿನ ನೆರವು ನೀಡುವ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳನ್ನು ಶಿಕ್ಷೆಗೆ ಗುರಿಪಡಿಸಲು ನೆರವಾಗಲಿದೆ.
ಚರ್ಚ್ ಸಂಸ್ಕಂತಿ ರಕ್ಷಿಸುವ ಗುರಿಯಿಂದ ಮಸೂದೆ ರಚಿಸಿ ಮಂಡಿಸಲಾಗಿದೆ. ಕೌಟುಂಬಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದು ಲೈಂಗಿಕ ಅಶ್ಲೀಲತೆಯಿಂದ ದೇಶವನ್ನು ಕಾಪಾಡಬೇಕಿದೆ. 389 ಸದಸ್ಯರು ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಯನ್ನು ಅಧ್ಯಕ್ಷ ಯೊವೆರೆ ಮುಸೆವೆನಿಯವರ ಸಹಿಗೆ ಕಳುಹಿಸಿ ಕೊಡಲಾಗುವುದು ಎಂದು ಮಸೂದೆ ಮಂಡಿಸಿರುವ ಶಾಸಕ ಅಸುಮಾನ್ ಬಸಲಿರ್ವಾ ತಿಳಿಸಿದ್ದಾರೆ.