Webdunia - Bharat's app for daily news and videos

Install App

ದೆವ್ವ ಕೊಟ್ಟ ಸೆಕ್ಸ್ ಸುಖ ಅಹಾ ಮರೆಯಲಾರೆ: ಅಮಂಡಾ ಟೀಗ್

Webdunia
ಬುಧವಾರ, 31 ಜನವರಿ 2018 (14:22 IST)
ಮಹಿಳೆಯೊಬ್ಬಳು 1700 ರಲ್ಲಿ ತೀರಿಕೊಂಡ ಹೈತಿಯನ್ ಕಡಲುಗಳ್ಳನ ಆತ್ಮವನ್ನು ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾಳೆ. ಐರಿಷ್ ರಾಷ್ಟ್ರದ ಈ ಮಹಿಳೆ ಅಮಂಡಾ ಟೀಗ್ ವಿಚಿತ್ರವಾಗಿ ಹೇಳಿಕೊಂಡಿದ್ದಾಳೆ.
1700 ರಲ್ಲಿ ತೀರಿಕೊಂಡ ಹೈತಿಯನ್ ಕಡಲುಗಳ್ಳ ಜಾಕ್ ಟೀಗ್‌ನ ಆತ್ಮವನ್ನು ಕಾನೂನು ಬದ್ಧವಾಗಿ ಮದುವೆ ಆಗಿರುವುದಾಗಿ ಜುಲೈ 2016 ರಲ್ಲಿ ಟೀಗ್ ಹೇಳಿಕೊಂಡಿದ್ದಾಳೆ. ಇನ್ನೊಂದು ವಿಚಿತ್ರವೆಂದರೆ, ಜಾಕ್ ಜೊತೆಗೆ “ಅವಳು ಅತ್ಯುತ್ತಮ ಲೈಂಗಿಕತೆ ಹೊಂದಿದ್ದಾಗಿ ಹೇಳಿಕೊಂಡಿರುವುದು”.
 
ಸತ್ತ ವ್ಯಕ್ತಿ ಅಥವಾ ವ್ಯಕ್ತಿಯ ಆತ್ಮವನ್ನು ಮದುವೆಯಾಗಿದ್ದರಿಂದ ಆ ವ್ಯಕ್ತಿಯನ್ನು ಯುಕೆ ಅಥವಾ ಐರ್ಲೆಂಡ್‌ನಲ್ಲಿ ಗುರುತಿಸಲಾಗಿಲ್ಲ, ಅಕ್ಟೋಬರ್ 2017 ರಲ್ಲಿ ಅಟ್ಲಾಂಟಿಕ್ ಸಮುದ್ರದ ಮಧ್ಯ ಸಣ್ಣ ಹಡಗೊಂದರಲ್ಲಿ ತನ್ನ ಹೈತಿಯನ್ ಕಡಲುಗಳ್ಳ ಗಂಡನ 'ಆತ್ಮ' ಜೊತೆಗೆ ಮರು ಮದುವೆಯಾಗಿದ್ದಾಳೆ. ಈ ಸಮಯದಲ್ಲಿ, ಅವರ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಭ್ರಮಿಸಿದ್ದಾರೆ.
 
ನಾಲ್ಕು ಮಕ್ಕಳ ವಿಚ್ಛೇದಿತ ತಾಯಿ, ಐರ್ಲೆಂಡ್‌ನ ಡ್ರೊಗೆಡಾದಲ್ಲಿರುವ ತನ್ನ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾಗ ಟೀಗ್ 300 ವರ್ಷದ ಹೈತಿಯನ್ ಕಡಲುಗಳ್ಳನನ್ನು ಭೇಟಿ ಆಗಿದ್ದಾಳೆ. ನಂತರದ ಆರು ತಿಂಗಳುಗಳಲ್ಲಿನ ತಮ್ಮಿಬ್ಬರ ನಡುವಿನ ಪರಸ್ಪರ ಪ್ರೀತಿಯನ್ನು ಬೆಳೆಸಲು ಮತ್ತು ಅಧಿಕೃತಗೊಳಿಸಲು ನಿರ್ಧರಿಸಿದರು.
 
ಸಾಮಾನ್ಯ ಸಂಬಂಧಗಳಂತೆ, ಟೀಗ್ ಮತ್ತು ಜಾಕ್ ವಾದಗಳು ಮತ್ತು ವಾರಾಂತ್ಯದ ಪ್ರಣಯ ವಿರಾಮಗಳಿಗೆ ಪ್ರವಾಸ ಹೋಗುವುದು ಮತ್ತು ಕಾಮಕ್ರೀಡೆಯಲ್ಲಿ ಸಹ ತೊಡಗಿಸಿಕೊಳ್ಳುವುದು ಇದೆಯಂತೆ. ನ್ಯೂಸ್‌ವೀಕ್ ವರದಿ ಪ್ರಕಾರ, ಟೀಗ್ ತಮ್ಮ ಬಾಂಧವ್ಯವನ್ನು "ನಂಬಿಕೆಗೆ ಮೀರಿದ್ದು" ಎಂದು ಹೇಳುತ್ತಾಳೆ.
 
ಟೀಗ್ ತನ್ನ ಗಂಡನ ಕೊನೆಯ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾಳೆ. ಅಮಂಡಾ ಲಾರ್ಜ್ ಆದ ಅವಳು, 2015 ರಲ್ಲಿ ಅಮಂಡಾ ಸ್ಪ್ಯಾರೋ ಲಾರ್ಜ್ ಆಗಿ ಬದಲಾಯಿಸಿಕೊಂಡಿದ್ದಾಳೆ. ಮಧ್ಯದ ಹೆಸರು ಸ್ಪ್ಯಾರೋ ಕೆರಿಬಿಯನ್‌ನ ಕಡಲುಗಳ್ಳರ ಸಂಪ್ರದಾಯದಂತೆ ಗೌರವಾರ್ಥವಾಗಿ ಅವಳು ಅನುಕರಣೆ ಮಾಡಿದ್ದಾಳೆ.
 
ಯುಕೆ ಅಥವಾ ಐರ್ಲೆಂಡ್‌ನಲ್ಲಿ ಟೀಗ್‌ನ ವಿವಾಹವು ಕಾನೂನುಬದ್ದವಾಗಿಲ್ಲದೇ ಇರಬಹುದು, ಆದರೆ ಕೆಲವು ದೇಶಗಳು ಅಥವಾ ಸಮುದಾಯಗಳು ತೀರಿಕೊಂಡ ವ್ಯಕ್ತಿಯ ಅಥವಾ ಆತ್ಮದ ಜೊತೆಗಿನ ಮದುವೆಯನ್ನು ಸಮ್ಮತಿಸುತ್ತವೆ.
 
ಫ್ರಾನ್ಸ್‌ನಲ್ಲಿ, ಫ್ರೆಂಚ್ ಸಿವಿಲ್ ಕೋಡ್ ಒಬ್ಬ ವ್ಯಕ್ತಿಯಗೆ ಸತ್ತ ವ್ಯಕ್ತಿಯ ಜೊತೆಗೆ ಮದುವೆಯಾಗಲು ಅನುವು ಮಾಡಿಕೊಡುತ್ತದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ, ಯುದ್ಧದಲ್ಲಿ ತೀರಿಕೊಂಡ ತಮ್ಮ ಸಂಗಾತಿಯೊಂದಿಗೆ ಮದುವೆ ಮಾಡಿಕೊಳ್ಳಲು ನೂರಾರು ಮಹಿಳೆಯರಿಗೆ ಫ್ರೆಂಚ್ ಸರ್ಕಾರವು ಅನುವು ಮಾಡಿಕೊಟ್ಟಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ