ಕೀವ್ : ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಇಂದಿಗೆ 15 ದಿನ. ಇಲ್ಲಿಯವರೆಗೆ ರಷ್ಯಾದ 12,000 ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಶಸ್ತ್ರಾಸ್ತ್ರ ಪಡೆ ಗುರುವಾರ ತಿಳಿಸಿದೆ.
ಫೆಬ್ರವರಿ 24 ರಂದು ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾಗಿತ್ತು. ಅಂದಿನಿಂದ ರಷ್ಯಾದ ಯಾವೆಲ್ಲಾ ಮಿಲಿಟರಿ ಸವಲತ್ತುಗಳನ್ನು ಉಕ್ರೇನ್ ನಾಶಪಡಿಸಿದೆ ಎಂದು ಕೀವ್ ಇಂಡಿಪೆಂಡೆಂಟ್ ತಿಳಿಸಿದೆ.
12,000 ಕ್ಕೂ ಹೆಚ್ಚು ಸೈನಿಕರು, 49 ವಿಮಾನಗಳು, 81 ಹೆಲಿಕಾಪ್ಟರ್ಗಳು, 335 ಟ್ಯಾಂಕ್ಗಳು, 123 ಫಿರಂಗಿ ಹಾಗೂ 2 ದೋಣಿಗಳು, 1,105 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು, 56 ಬಹು ರಾಕೆಟ್ ಉಡಾವಣಾ ಯಂತ್ರಗಳು(ರಾಕೆಟ್ ಲಾಂಚಿಂಗ್ ಸಿಸ್ಟಮ್),
526 ವಾಹನಗಳು ಹಾಗೂ 60 ಇಂಧನ ಟ್ಯಾಂಕ್ಗಳು, 29 ವಿಮಾನ ವಿರೋಧಿ ಶಸ್ತ್ರಾಸ್ತ್ರಗಳು, 7 ಮಾನವರಹಿತ ವಿಮಾನ(ಡ್ರೋನ್)ಗಳನ್ನು ನಾಶಪಡಿಸಿರುವುದಾಗಿ ತಿಳಿಸಿದೆ.