Select Your Language

Notifications

webdunia
webdunia
webdunia
webdunia

ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಚೀನಾಕ್ಕೆ ಭಾರತ ಕೊಡುತ್ತಿರುವ ತಿರುಗೇಟು ಹೇಗೆ ಗೊತ್ತಾ?

ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಚೀನಾಕ್ಕೆ ಭಾರತ ಕೊಡುತ್ತಿರುವ ತಿರುಗೇಟು ಹೇಗೆ ಗೊತ್ತಾ?
Dhoklam , ಗುರುವಾರ, 20 ಜುಲೈ 2017 (09:43 IST)
ಢೋಕ್ಲಾಂ: ಯುದ್ಧೋತ್ಸಾಹದಲ್ಲಿರುವ ಚೀನಾ ಪಡೆಗಳು ಭಾರತ ಚೀನಾ ಗಡಿಯಲ್ಲಿ ಭಾರೀ ಶಸ್ತ್ರಾಸ್ತ್ರ ಸಾಗಣೆ, ಜಮಾವಣೆ ಮಾಡುತ್ತಿದೆ ಎಂಬ ವರದಿಗಳು ಬಂದಿವೆ. ಸಿಕ್ಕಿಂ ಗಡಿಯಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಾಗಿಸಿರುವುದರ ಉದ್ದೇಶ ಯಾವುದೇ ಸಂದರ್ಭದಲ್ಲೂ ಭಾರತದ ವಿರುದ್ಧ ಸನ್ನದ್ಧವಾಗಿರುವುದು ಎಂದೇ ಬಣ್ಣಿಸಲಾಗಿದೆ.


ಇದೇ ಸಂದರ್ಭದಲ್ಲಿ ಭಾರತ ಕೂಡಾ ಈ ಗುಡ್ಡ ಗಾಡು ಪ್ರದೇಶದಲ್ಲಿ ತನ್ನ ವಾಯುಸೇನಾ ಬಲವನ್ನು ಶಕ್ತಿಯುತಗೊಳಿಸುತ್ತಿದೆ. ಶತ್ರು ರಾಷ್ಟ್ರಗಳ ಆಕ್ರಮಣವನ್ನು ಯಾವುದೇ ಕ್ಷಣದಲ್ಲಿ ಎದುರಿಸಲು ಭಾರತದ ವಾಯುಸೇನೆ ತನ್ನ ಯುದ್ಧ ವಿಮಾನಗಳನ್ನು ಇಳಿಸಲು ನೆರವಾಗುವಂತಹ ಲ್ಯಾಂಡಿಂಗ್ ಪಾಯಿಂಟ್ ನಿರ್ಮಿಸುವಲ್ಲಿ ನಿರತವಾಗಿದೆ ಎನ್ನಲಾಗಿದೆ.

ಭಾರೀ ಶಸ್ತ್ರಾಸ್ತ್ರ ಸಾಗಿಸಿದ ಚೀನಾ ಈ ಮೂಲಕ ಭಾರತವನ್ನು ಬೆದರಿಸುವ ತಂತ್ರ ಮಾಡುತ್ತಿರಬಹುದಷ್ಟೇ ಎಂದು ನಂಬಲಾಗಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಚೀನಾ ಎಂದಿನಂತೆ ತನ್ನ ಸೇನಾ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ಈ ಸಾಗಣೆ ಮಾಡಿದೆಯಷ್ಟೇ ಎನ್ನಲಾಗಿದೆ. ಹಾಗಿದ್ದರೂ, ಚೀನಾದ ಯಾವುದೇ ಆಕ್ರಮಣಗಳನ್ನು ತಡೆಯಲು ಭಾರತದ ಯೋಧರು ಸಕಲ ಸಜ್ಜಾಗುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಭವನದ ‘ನಾಥ’ ಯಾರಾಗ್ತಾರೆ? ಹೇಗೆ ನಡೆಯುತ್ತೆ ಮತ ಎಣಿಕೆ?