ಪುನರುತ್ಪಾದಿಸಲಾಗದ ಶಕ್ತಿ ಮೂಲಗಳ ವಿಪರೀತ ಬಳಕೆಯಿಂದ ಅವು ಮುಗಿಯುವ ಸ್ಥಿತಿ ಬಂದೊಗದಿದ್ದು, ವಿಜ್ಞಾನಿಗಳು ನವೀಕರಿಸಬಹುದಾದ ಶಕ್ತಿ ಮೂಲಗಳು, ಇಂಧನದ ಪುನರ್ಬಳಕೆ ಸೇರಿದಂತೆ ವಿವಿಧ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಅಂತಹ ಸಂಶೋಧನೆಗಳಲ್ಲಿ ಒಂದು ಮಾನವ ತ್ಯಾಜ್ಯವನ್ನು ಬಳಸಿ ಇಂಧನ ತಯಾರಿಕೆ.
ಮಾನವ ತ್ಯಾಜ್ಯವನ್ನು ಶಕ್ತಿಮೂಲವಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ತೊಡಗಿರುವ ಅಮೇರಿಕದ ವಿಜ್ಞಾನಿಗಳು ಇದರಲ್ಲಿ ಸಫಲತೆಯನ್ನು ಸಾಧಿಸಿದ್ದಾರೆ. ಹೀಗಾಗಿ ಮಾನವ ತ್ಯಾಜ್ಯ ಭವಿಷ್ಯದ ಇಂಧನವಾಗಿ ಬಳಕೆಗೆ ಬರುವ ಕಾಲ ದೂರವಿಲ್ಲ.
ಮಾನವ ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸುವ ನೂತನ ತಂತ್ರಜ್ಞಾನವೀಗ ವಿಜ್ಞಾನಿಗಳ ಬತ್ತಳಿಕೆಯಲ್ಲಿದೆ. ಭೂಮಿಯಿಂದ ಕಚ್ಚಾತೈಲವನ್ನು ಹೊರತೆಗೆಯುವ ಮಾದರಿಯ ತಂತ್ರಜ್ಞಾನವನ್ನು ಅನುಸರಿಸಿ ಮಾನವ ತ್ಯಾಜ್ಯದಿಂದಲೂ ಇಂಧನವನ್ನು ತಯಾರಿಸಬಹುದೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಭೂಗರ್ಭದಲ್ಲಿ ಲಕ್ಷಾಂತರ ವರ್ಷಗಳ ಪ್ರಕ್ರಿಯೆಯಿಂದ ಕಚ್ಚಾತೈಲ ತಯಾರಾಗುತ್ತದೆ. ಆದರೆ ವೈಜ್ಞಾನಿಕ ಮಾದರಿಯಲ್ಲಿ ಕೆಲ ನಿಮಿಷದಲ್ಲೇ ಮಾನವ ತ್ಯಾಜ್ಯದಿಂದ ಇಂಧನವನ್ನು ತಯಾರಿಸಬಹುದು. ಇದನ್ನು ಪೆಟ್ರೋಲಿಯಂ ಉತ್ಪನ್ನಗಳಂತೆ ಬಳಸಬಹುದು ಎಂದು ಅಮೇರಿಕನ್ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ