Select Your Language

Notifications

webdunia
webdunia
webdunia
webdunia

ಬೀಕರ ಅಗ್ನಿ ಅವಘಡ: ಪಲ್ಟಿಯಾದ ಟ್ಯಾಂಕರ್`ನಿಂದ ಪೆಟ್ರೋಲ್ ತುಂಬಿಕೊಳ್ಳಲು ಹೋಗಿದ್ದ 120 ಮಂದಿ ದುರ್ಮರಣ

ಬೀಕರ ಅಗ್ನಿ ಅವಘಡ: ಪಲ್ಟಿಯಾದ ಟ್ಯಾಂಕರ್`ನಿಂದ ಪೆಟ್ರೋಲ್ ತುಂಬಿಕೊಳ್ಳಲು ಹೋಗಿದ್ದ 120 ಮಂದಿ ದುರ್ಮರಣ
ಇಸ್ಲಾಮಾಬಾದ್ , ಭಾನುವಾರ, 25 ಜೂನ್ 2017 (10:30 IST)
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಲ್ಪುರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು 120 ಮಂದಿ ಸಾವಿಗೀಡಾಗಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಭಾನುವಾರ ಬೆಳಗಿನ ಜಾವ ಬಹವಲ್ಪುರದ ಅಹಮದ್ಪುರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಅಧಿಕ ವೇಗದಿಂದ ಪಲ್ಟಿ ಹೊಡೆದಿದೆ. ಈ ಸಂದರ್ಭ ಲೀಕ್ ಆಗುತ್ತಿದ್ದ ಪೆಟ್ರೋಲ್ ತುಂಬಿಕೊಳ್ಳಲು ಸ್ಥಳೀಯರು ಮುಂದಾಗಿದ್ದಾರೆ. ಇದೇವೇಳೆ, ಟ್ಯಾಂಕರ್`ಗೆ ಬೆಂಕಿ ಹೊತ್ತುಕೊಂಡು ಮಹಾಸ್ಫೋಟ ಸಂಭವಿಸಿದೆ.

ಪೆಟ್ರೋಲ್ ತುಂಬಿಕೊಳ್ಳುತ್ತಿದ್ದವರು ಸೇರಿ 120ಕ್ಕೂ ಅಧಿಕ ಮಂದಿ ಸ್ಥಳೀಯರು ಸಾವಿಗೀಡಾಗಿದ್ದಾರೆ. ಸ್ಫೋಟದ ರಭಸಕ್ಕೆ ದೇಹಗಳು ಛಿದ್ರವಾಗಿ ದೂರಕ್ಕೆ ಚಿಮ್ಮಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಮೂಲದ ಸಿಖ್ ಮಹಿಳೆ ಕೆನಡಾ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ